14 July 2026 |

ಮಂಗಳೂರಿನಲ್ಲಿ ಮತ್ತೆ 8 ಬಾಂಗ್ಲಾದೇಶಿ ಅಕ್ರಮ ವಲಸಿಗರ ಪತ್ತೆ; ಒಟ್ಟು ಸಂಖ್ಯೆ 16ಕ್ಕೆ ಏರಿಕೆ

  • 14 Jul 2026 12:48:47 AM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಮುಕ್ಕ ಹಾಗೂ ಕೋಡಿಕಲ್ ಪ್ರದೇಶಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಇನ್ನೂ 8 ಮಂದಿ ಬಾಂಗ್ಲಾದೇಶ ಮೂಲದ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇದೇ ಪ್ರದೇಶಗಳಲ್ಲಿ 8 ಮಂದಿ ಅಕ್ರಮ ವಲಸಿಗರನ್ನು ಬಂಧಿಸಲಾಗಿತ್ತು.

 

ಇದರಿಂದ ಮುಕ್ಕ ಹಾಗೂ ಕೋಡಿಕಲ್ ಪ್ರದೇಶಗಳಲ್ಲಿ ಇದುವರೆಗೆ ಪತ್ತೆಯಾದ ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

 

ಪೊಲೀಸರು ಸಂಬಂಧಪಟ್ಟವರ ದಾಖಲೆಗಳು ಹಾಗೂ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಕುರಿತು ತನಿಖೆ ಮುಂದುವರಿಸಿದ್ದು, ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ವಲಸೆಯನ್ನು ತಡೆಯಲು ಜಿಲ್ಲೆಯಲ್ಲಿ ನಿಗಾ ಹಾಗೂ ಪರಿಶೀಲನೆ ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.