16 July 2026 |

ಚಿಕನ್, ಮೊಟ್ಟೆ ಬೆಲೆಯಲ್ಲಿ ಭಾರೀ ಏರಿಕೆ: ಮಾಂಸಾಹಾರ ಪ್ರಿಯರಿಗೆ ಹೆಚ್ಚಿದ ಖರ್ಚಿನ ಹೊರೆ

  • 15 Jul 2026 07:45:20 PM

ಬೆಂಗಳೂರು: ರಾಜ್ಯದ ಮಾಂಸಾಹಾರ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಚಿಕನ್ ಹಾಗೂ ಮೊಟ್ಟೆಗಳ ದರದಲ್ಲಿ ಗಮನಾರ್ಹ ಏರಿಕೆ ದಾಖಲಾಗಿದ್ದು, ಗ್ರಾಹಕರು ಹೆಚ್ಚುವರಿ ವೆಚ್ಚ ಭರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಚಿಕನ್ ಬೆಲೆ ಏರಿಕೆಯಿಂದ ಒಂದು ಕೆಜಿ ಚಿಕನ್ ಖರೀದಿಸುವುದಕ್ಕೂ ಜನರು ಲೆಕ್ಕಾಚಾರ ಮಾಡುವಂತಾಗಿದೆ. ವಿಶೇಷವಾಗಿ ಕರಾವಳಿ ಭಾಗದಲ್ಲಿ ಈಗಾಗಲೇ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಿರುವ ಕಾರಣ ತಾಜಾ ಮೀನುಗಳ ಲಭ್ಯತೆ ಕಡಿಮೆಯಾಗಿದೆ. ಇದರ ನಡುವೆ ಚಿಕನ್ ಮತ್ತು ಮೊಟ್ಟೆ ದರಗಳ ಹೆಚ್ಚಳ ಜನರಲ್ಲಿ ಅಸಮಾಧಾನ ಮೂಡಿಸಿದೆ.

 

ಮಾರುಕಟ್ಟೆ ಮೂಲಗಳ ಪ್ರಕಾರ, ಕೋಳಿಗಳ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಆಗದಿರುವುದರಿಂದ ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಲಭ್ಯತೆ ಕಡಿಮೆಯಾಗಿದ್ದು, ದರ ಏರಿಕೆಗೆ ಕಾರಣವಾಗಿದೆ.

 

ಇದರ ಜೊತೆಗೆ ಇತರೆ ರಾಜ್ಯಗಳಿಂದಲೂ ಚಿಕನ್‌ಗೆ ಬೇಡಿಕೆ ಹೆಚ್ಚಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಪೂರೈಕೆ ಮತ್ತಷ್ಟು ಕುಂಠಿತವಾಗಿದೆ. ಪರಿಣಾಮವಾಗಿ ಚಿಕನ್ ಬೆಲೆ ದಿನೇದಿನೇ ಏರಿಕೆಯಾಗುತ್ತಿದೆ. ಇದೇ ವೇಳೆ ಮೊಟ್ಟೆಗಳ ದರವೂ ಗಣನೀಯವಾಗಿ ಹೆಚ್ಚಳ ಕಂಡುಬಂದಿದ್ದು, ಗ್ರಾಹಕರ ಜೇಬಿನ ಮೇಲಿನ ಹೊರೆ ಹೆಚ್ಚಿಸಿದೆ.