21 September 2026 |

ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಏನಾಗುತ್ತಿದೆ? BSFಗೆ 1,024 ಎಕರೆ ಭೂಮಿಯನ್ನು ಪಶ್ಚಿಮ ಬಂಗಾಳ ಸರ್ಕಾರ ಹಸ್ತಾಂತರಿಸಿದ ಕಾರಣವೇನು?

  • 16 Jul 2026 09:42:12 AM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭದ್ರತಾ ವಿಚಾರದಲ್ಲಿ ಹಲವು ಕಠಿಣ ಕ್ರಮಗಳು ಜಾರಿಯಾಗುತ್ತಿವೆ. ಈಗಾಗಲೇ ಬಾಂಗ್ಲಾದೇಶದ ನುಸುಳುಕೋರರನ್ನು ಗುರುತಿಸಿ ಮರಳಿ ಕಳುಹಿಸುವ ಪ್ರಕ್ರಿಯೆ ಜೋರಾಗಿ ನಡೆಯುತ್ತಿದ್ದು, ಇದರ ಜೊತೆಗೆ ಭಾರತ–ಬಾಂಗ್ಲಾದೇಶ ಗಡಿಯನ್ನು ಮತ್ತಷ್ಟು ಸುಭದ್ರಗೊಳಿಸುವ ಕಾರ್ಯಗಳಿಗೂ ವೇಗ ನೀಡಲಾಗಿದೆ.

 

ಆ ಪ್ರಕಾರ, ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಭದ್ರತಾ ಬೇಲಿ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವ ಉದ್ದೇಶದಿಂದ ಪಶ್ಚಿಮ ಬಂಗಾಳ ಸರ್ಕಾರವು ಗಡಿ ಭದ್ರತಾ ಪಡೆ (BSF)ಗೆ 1,024.75 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ.

 

ಈ ಭೂಮಿ ಹಸ್ತಾಂತರದಿಂದ ಸುಮಾರು 172.6 ಕಿ.ಮೀ. ಉದ್ದದ ಗಡಿ ಪ್ರದೇಶದಲ್ಲಿ ಬೇಲಿ ನಿರ್ಮಾಣ ಹಾಗೂ ಅಗತ್ಯ ಮೂಲಸೌಕರ್ಯ ಕಾಮಗಾರಿಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ನೆರವಾಗಲಿದೆ. ವರದಿಗಳ ಪ್ರಕಾರ, ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಮಾರು ಎರಡು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿದೆ.  

 

ಈ ಕ್ರಮದಿಂದ ಅಕ್ರಮ ನುಸುಳುವಿಕೆ, ಗಡಿ ಕಳ್ಳಸಾಗಣೆ ಸೇರಿದಂತೆ ಗಡಿ ಸಂಬಂಧಿತ ಅಪರಾಧಗಳನ್ನು ತಡೆಯಲು ನೆರವಾಗುವ ನಿರೀಕ್ಷೆಯಿದೆ. ಭಾರತ–ಬಾಂಗ್ಲಾದೇಶ ಗಡಿಯಲ್ಲಿ ಅತ್ಯಂತ ಉದ್ದವಾದ ಗಡಿ ಹೊಂದಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳವೂ ಒಂದಾಗಿದೆ.