21 September 2026 |

ಕಳೆದ ವರ್ಷ ನಷ್ಟದಲ್ಲಿದ್ದ MRPL, ಈ ಬಾರಿ ಮೊದಲ ತ್ರೈಮಾಸಿಕದಲ್ಲೇ ₹915 ಕೋಟಿ ಲಾಭ!

  • 17 Jul 2026 01:08:44 PM

ಮಂಗಳೂರು: MRPL (ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್) 2026-27ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹915 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗೆ ₹272 ಕೋಟಿ ನಷ್ಟವಾಗಿತ್ತು.

 

ಕಂಪನಿಯ ಒಟ್ಟು ಆದಾಯವೂ ₹20,989 ಕೋಟಿಯಿಂದ ₹41,609 ಕೋಟಿಗೆ ಏರಿಕೆಯಾಗಿ ಸುಮಾರು ದುಪ್ಪಟ್ಟಾಗಿದೆ. ತೆರಿಗೆ ಪೂರ್ವ ಲಾಭ ₹1,215 ಕೋಟಿ ದಾಖಲಾಗಿದೆ.

 

ಇದರ ಜೊತೆಗೆ, ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ಇಂಧನ (ATF) ಪೈಪ್‌ಲೈನ್‌ಗೆ ಅನುಮೋದನೆ ದೊರೆತಿದ್ದು, ವಿವಿಧ ಟರ್ಮಿನಲ್‌ಗಳಲ್ಲಿ ಉತ್ಪನ್ನಗಳ ಸಾಗಣೆ ಹಾಗೂ ಸಂಗ್ರಹಣಾ ಯೋಜನೆಗಳನ್ನೂ ಕಂಪನಿ ಮುಂದುವರಿಸಿದೆ.

 

ಒಟ್ಟಾರೆ ಕಳೆದ ವರ್ಷ ನಷ್ಟ ಅನುಭವಿಸಿದ್ದ MRPL, ಈ ವರ್ಷ ಮೊದಲ ತ್ರೈಮಾಸಿಕದಲ್ಲೇ ಲಾಭದ ಹಾದಿಗೆ ಮರಳಿರುವುದು ಕಂಪನಿಯ ಆರ್ಥಿಕ ಚೇತರಿಕೆಯ ಸೂಚನೆಯಾಗಿದೆ.