ಪುತ್ತೂರು: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾದ ನೀಟ್-2026 ಪರೀಕ್ಷೆಯ ಫಲಿತಾಂಶದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ದಾಖಲಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿನಿ ಮಂಗಳಾಮೃತ ಕೆ. ಆರ್. ಅವರು 533 ಅಂಕಗಳನ್ನು ಪಡೆದು 97.35 ಪರ್ಸೆಂಟೈಲ್ಗಳಿಸುವ ಮೂಲಕ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಇನ್ನೊಬ್ಬ ವಿದ್ಯಾರ್ಥಿನಿ ಅದಿತಿ ಯು. 531 ಅಂಕಗಳೊಂದಿಗೆ 97.25 ಪರ್ಸೆಂಟೈಲ್, ಧನ್ವಿ ಆರ್. ಬಿ. 519 ಅಂಕಗಳೊಂದಿಗೆ 96.61 ಪರ್ಸೆಂಟೈಲ್, ಹಾಗೂ ಮಾನ್ಯತಾ 510 ಅಂಕಗಳೊಂದಿಗೆ 96.09 ಪರ್ಸೆಂಟೈಲ್ಪಡೆದು ಕಾಲೇಜಿನ ಸಾಧನೆಗೆ ಮತ್ತಷ್ಟು ಮೆರುಗು ತಂದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ವೃಂದ ಅಭಿನಂದನೆ ಸಲ್ಲಿಸಿದ್ದು, ಮುಂದಿನ ವೈದ್ಯಕೀಯ ಶಿಕ್ಷಣದಲ್ಲಿಯೂ ಇದೇ ರೀತಿಯ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.





