21 September 2026 |

ಈಗ ಸದ್ದು ಮಾಡುತ್ತಿರುವ ಬಿ.ಸಿ.ರೋಡ್ ಲಾವಣ್ಯ ಹತ್ಯೆ ಆರೋಪಿ ಚೇತನ್ ಗೌಡನ ವೈರಲ್ ವಿಡಿಯೋ

  • 18 Jul 2026 05:27:38 PM

ಬಂಟ್ವಾಳ: ಬಿ.ಸಿ.ರೋಡ್‌ನಲ್ಲಿ ಯುವತಿ ಲಾವಣ್ಯ ಹತ್ಯೆ ಪ್ರಕರಣದ ಬೆನ್ನಲ್ಲೇ, ಆರೋಪಿ ಚೇತನ್ ಗೌಡನ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

 

ವೈರಲ್ ಆಗಿರುವ ವಿಡಿಯೋದಲ್ಲಿ ಚೇತನ್ ಗೌಡ ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಾ “ತಲೆಯ ಹಿಂದೆ ಒಂದೇ ಪೆಟ್ಟು, ಬಲವಾಗಿ ಹೊಡೆದರೆ ಫಿನಿಷ್” ಎಂದು ಹೇಳುತ್ತಿರುವುದು ಕಂಡುಬರುತ್ತದೆ.

 

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಹಲವರು “ಇದೇ ರೀತಿಯಲ್ಲಿ ಲಾವಣ್ಯಳಿಗೂ ಹೊಡೆದಿದ್ದ ಪಾಪಿ” ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಈ ವೈರಲ್ ವಿಡಿಯೋ ಪ್ರಕರಣದ ಕುರಿತು ಹೊಸ ಚರ್ಚೆಗೆ ಕಾರಣವಾಗಿದ್ದು, ಇದು ಯಾವ ಸಂದರ್ಭದಲ್ಲಿನ ವಿಡಿಯೋ, ಯಾವಾಗ ಚಿತ್ರೀಕರಿಸಲಾಗಿದೆ ಹಾಗೂ ತನಿಖೆಗೆ ಯಾವುದೇ ಸಂಬಂಧವಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ.

 

ಸದ್ಯ ಈ ವೈರಲ್ ವಿಡಿಯೋ ಕುರಿತು ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ವಿಡಿಯೋದ ನೈಜತೆ ಹಾಗೂ ಅದರ ಹಿನ್ನೆಲೆಯ ಬಗ್ಗೆ ಪೊಲೀಸ್ ಇಲಾಖೆ ಇನ್ನೂ ಯಾವುದೇ ದೃಢೀಕರಣ ನೀಡಿಲ್ಲ.