ತಿರುವನಂತಪುರಂ: ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯವನ್ನು ವೀಕ್ಷಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೇರಳ ಸರ್ಕಾರ ಸೋಮವಾರ (ಜುಲೈ 20) ರಾಜ್ಯದ ಎಲ್ಲಾ ಶಾಲೆಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.
ಅರ್ಜೆಂಟಿನಾ ಮತ್ತು ಸ್ಪೇನ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಭಾನುವಾರ ತಡರಾತ್ರಿ ಆರಂಭವಾಗಲಿದ್ದು, ಪಂದ್ಯ ಮುಗಿಯುವ ವೇಳೆಗೆ ಸೋಮವಾರ ಮುಂಜಾನೆ ಆಗುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಸಮಯಕ್ಕೆ ಹಾಜರಾಗಲು ಕಷ್ಟವಾಗಬಹುದು ಎಂಬ ಮನವಿಗಳನ್ನು ಪರಿಗಣಿಸಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಕೇರಳ ಸರಕಾರ ಈ ಕುರಿತು ಘೋಷಣೆ ಮಾಡಿದ್ದು, ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಸಾಮಾನ್ಯ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಶಾಲೆಗಳಿಗೆ ರಜೆ ಅನ್ವಯವಾಗಲಿದೆ.
ಫುಟ್‌ಬಾಲ್‌ಗೆ ಅಪಾರ ಅಭಿಮಾನ ಹೊಂದಿರುವ ಕೇರಳದಲ್ಲಿ ವಿಶ್ವಕಪ್ ಫೈನಲ್ ಹಿನ್ನೆಲೆಯಲ್ಲಿ ಸರ್ಕಾರವೇ ರಜೆ ಘೋಷಿಸಿರುವುದು ದೇಶಾದ್ಯಂತ ಗಮನ ಸೆಳೆದಿದೆ.





