ಮಂಗಳೂರು: ಶಿರಿಬಾಗಿಲು ಮತ್ತು ಯಡಕುಮೇರಿ ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಮಾಡಲಾಗುತ್ತಿದೆ. ಈ ಕಾರಣದಿಂದ ಬೆಂಗಳೂರು–ಮಂಗಳೂರು ಹಾಗೂ ಯಶವಂತಪುರ–ಕಾರವಾರ ಮಾರ್ಗದ ಕೆಲವು ರೈಲುಗಳ ಸಂಚಾರವನ್ನು ನಿಗದಿತ ದಿನಗಳಲ್ಲಿ ರದ್ದುಗೊಳಿಸಲಾಗಿದೆ.
ಬೆಳಗ್ಗೆ 7 ಗಂಟೆಗೆ ಯಶವಂತಪುರದಿಂದ ಮಂಗಳೂರು ಜಂಕ್ಷನ್‌ಗೆ ಹೊರಡುವ 16575 ಸಂಖ್ಯೆಯ ರೈಲು ಆಗಸ್ಟ್ 4, 6, 8, 11, 13, 15, 22, 25, 27, 29 ಹಾಗೂ ಸೆಪ್ಟೆಂಬರ್ 1 ಮತ್ತು 3ರಂದು ಸಂಚರಿಸುವುದಿಲ್ಲ. ಇದೇ ರೀತಿ ಬೆಳಗ್ಗೆ 7 ಗಂಟೆಗೆ ಮಂಗಳೂರು ಜಂಕ್ಷನ್‌ನಿಂದ ಯಶವಂತಪುರಕ್ಕೆ ತೆರಳುವ 16576 ಸಂಖ್ಯೆಯ ರೈಲು ಆಗಸ್ಟ್ 5, 7, 9, 12, 14, 16, 23, 26, 28, 30 ಹಾಗೂ ಸೆಪ್ಟೆಂಬರ್ 2 ಮತ್ತು 4ರಂದು ರದ್ದಾಗಲಿದೆ.
ಯಶವಂತಪುರದಿಂದ ಬೆಳಗ್ಗೆ 7 ಗಂಟೆಗೆ ಹೊರಡುವ 16515 ಸಂಖ್ಯೆಯ ಯಶವಂತಪುರ–ಕಾರವಾರ ಟ್ರೈ-ವೀಕ್ಲಿ ರೈಲು ಆಗಸ್ಟ್ 5, 7, 9, 12, 14, 21, 23, 26, 28, 30 ಹಾಗೂ ಸೆಪ್ಟೆಂಬರ್ 2ರಂದು ಸಂಚರಿಸುವುದಿಲ್ಲ. ಕಾರವಾರದಿಂದ ಬೆಳಗ್ಗೆ 5.30ಕ್ಕೆ ಹೊರಡುವ 16516 ಸಂಖ್ಯೆಯ ಕಾರವಾರ–ಯಶವಂತಪುರ ರೈಲು ಆಗಸ್ಟ್ 6, 8, 10, 13, 15, 22, 24, 27, 29, 31 ಹಾಗೂ ಸೆಪ್ಟೆಂಬರ್ 3ರಂದು ರದ್ದುಗೊಳ್ಳಲಿದೆ.
ಇನ್ನು 16539 ಸಂಖ್ಯೆಯ ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಸ್ಟ್ 10, 24 ಮತ್ತು 31ರಂದು ಸಂಚಾರ ನಡೆಸುವುದಿಲ್ಲ. ಇದರ ಪ್ರತಿಯಾಗಿ 16540 ಸಂಖ್ಯೆಯ ಮಂಗಳೂರು–ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ಆಗಸ್ಟ್ 11, 25 ಹಾಗೂ ಸೆಪ್ಟೆಂಬರ್ 1ರಂದು ರದ್ದಾಗಲಿದೆ.
ಉಳಿದ ಮೂರು ರೈಲುಗಳ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.





