ಮಂಗಳೂರು: ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಮುಖ್ಯ ಜಾಗರೂಕತಾ ಅಧಿಕಾರಿಯಾಗಿ (CVO) ಐಎಎಸ್ ಅಧಿಕಾರಿ ಮೊಹಮ್ಮದ್ ಅಲಿ ಶಿಹಾಬ್ ಎ. ನೇಮಕಗೊಂಡಿದ್ದಾರೆ.
ನಾಗಾಲ್ಯಾಂಡ್ ಕೇಡರ್‌ನ 2011ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಮೊಹಮ್ಮದ್ ಅಲಿ ಶಿಹಾಬ್ ಅವರ ನೇಮಕಾತಿಗೆ ಭಾರತ ಸರ್ಕಾರದ ಸಕ್ಷಮ ಪ್ರಾಧಿಕಾರ ಅನುಮೋದನೆ ನೀಡಿದೆ.
ರಾಜ್ಯ ಸಚಿವಾಲಯ ಹಾಗೂ ಜಿಲ್ಲಾಡಳಿತದ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಅವರು, ನಾಗಾಲ್ಯಾಂಡ್ ಸರ್ಕಾರದ ಹಲವು ಅಭಿವೃದ್ಧಿ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸಿದ್ದಾರೆ. ಆಡಳಿತಾತ್ಮಕ ಅನುಭವ ಮತ್ತು ಪರಿಣಾಮಕಾರಿ ಆಡಳಿತದಲ್ಲಿ ಹೊಂದಿರುವ ಪರಿಣತಿಯನ್ನು ಪರಿಗಣಿಸಿ ಅವರನ್ನು MRPLನ ಮುಖ್ಯ ಜಾಗರೂಕತಾ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.





