ಮಂಗಳೂರು : ನಗರದ ಅತ್ತಾವರದಲ್ಲಿರುವ ಖಾಸಗಿ ಹೊಟೇಲ್‌ನ ಲಿಫ್ಟ್‌ನಲ್ಲಿ ಸುಮಾರು ಒಂದು ಗಂಟೆ ಕಾಲ ಸಿಲುಕಿಕೊಂಡಿದ್ದ ಮೂವರು ವ್ಯಕ್ತಿಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ಹೊರತಂದಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡ ಮೂಲದ ಮೂವರು ವ್ಯಕ್ತಿಗಳು ಕೆಲಸದ ನಿಮಿತ್ತ ಮಂಗಳೂರಿಗೆ ಆಗಮಿಸಿ ಅತ್ತಾವರದ ಹೊಟೇಲ್‌ನಲ್ಲಿ ತಂಗಿದ್ದರು. ಇಂದು ಬೆಳಗ್ಗೆ ಹೊಟೇಲ್‌ನಿಂದ ಹೊರಗೆ ತೆರಳಲು ಲಿಫ್ಟ್ ಬಳಸಿದ ವೇಳೆ, ಬಾಗಿಲು ತೆರೆಯದೆ ಲಿಫ್ಟ್‌ನೊಳಗೇ ಸಿಲುಕಿಕೊಂಡಿದ್ದಾರೆ.
ತಕ್ಷಣವೇ ಅವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಕರೆ ಬಂದ ಕೆಲವೇ ನಿಮಿಷಗಳಲ್ಲಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಲಿಫ್ಟ್‌ನ ಬಾಗಿಲು ತೆರೆಯುವ ಮೂಲಕ ಒಳಗೆ ಸಿಲುಕಿದ್ದ ಮೂವರನ್ನೂ ಯಾವುದೇ ಅಪಾಯವಾಗದಂತೆ ಹೊರಗೆ ಕರೆತಂದಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಅನಂತ್ ಬಾಬು, ಸುಮಾರು ಒಂದು ಗಂಟೆ ಕಾಲ ಲಿಫ್ಟ್‌ನೊಳಗೆ ಸಿಲುಕಿಕೊಂಡಿದ್ದೆವು. ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಮ್ಮನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಅವರ ತ್ವರಿತ ಕಾರ್ಯಾಚರಣೆಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.





