10 September 2026 |

ಸೆ.10ರಂದು ಪುತ್ತೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

  • 09 Sep 2026 02:30:32 PM

ಪುತ್ತೂರು: ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 10ರಂದು ಪುತ್ತೂರಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

 

110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್ ಹಾಗೂ ವಾಟರ್ ಸಪ್ಪೆ ಫೀಡರ್‌ಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ತಿಳಿಸಿದೆ.

 

ಈ ಹಿನ್ನೆಲೆಯಲ್ಲಿ ವಾಟರ್ ಸಪ್ಪೆ, ದರ್ಬೆ, ಕೆಎಸ್‌ಆರ್‌ಟಿಸಿ, ನೆಲ್ಲಿಕಟ್ಟೆ, ಕಲ್ಲಾರೆ, ಸಾಮೆತ್ತಡ್ಕ, ಹನುಮಾನ್ ಮಿಲ್, ಅಶ್ವಿನಿ ಸರ್ಕಲ್, ಐಬಿ ಹಾಗೂ ಎಂ.ಟಿ. ರೋಡ್ ಸುತ್ತಮುತ್ತಲಿನ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.