13 September 2026 |

ಕೊಕ್ಕಡ ಬಳಿ ಸರ್ಕಾರಿ ಬಸ್–ಕಾರು ಭೀಕರ ಅಪಘಾತ; ಕಾರು ಚಾಲಕನಿಗೆ ಗಾಯ

  • 12 Sep 2026 05:32:16 PM

ಕೊಕ್ಕಡ: ಧರ್ಮಸ್ಥಳ–ಕುಕ್ಕೆ ಸುಬ್ರಹ್ಮಣ್ಯ ಮಾರ್ಗದಲ್ಲಿ ಸರ್ಕಾರಿ ಬಸ್ ಹಾಗೂ ಟಾಟಾ ಸಫಾರಿ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಸೆ.12ರಂದು ಕೊಕ್ಕಡ ಸಮೀಪ ನಡೆದಿದೆ.

 

ಧರ್ಮಸ್ಥಳದಿಂದ ಬೆಂಗಳೂರಿನತ್ತ ತೆರಳುತ್ತಿದ್ದ ಟಾಟಾ ಸಫಾರಿ ಕಾರು ಹಾಗೂ ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳದ ಕಡೆಗೆ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿದೆ.

 

ಡಿಕ್ಕಿಯ ರಭಸಕ್ಕೆ ಎರಡೂ ವಾಹನಗಳು ತೀವ್ರವಾಗಿ ಹಾನಿಗೊಂಡಿದ್ದು, ಬಸ್ ಮತ್ತು ಕಾರು ನಜ್ಜುಗುಜ್ಜಾಗಿವೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಕಾರು ಚಾಲಕನ ಕೈಗೆ ಮುರಿತವಾಗಿದ್ದು, ಇತರ ಕೆಲವರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ.