02 October 2026 |

ವಾಣಿಜ್ಯ LPG ಸಿಲಿಂಡರ್ ದುಬಾರಿ: ಬೆಂಗಳೂರಿನಲ್ಲಿ ₹2,898ಕ್ಕೆ ಏರಿಕೆ

  • 01 Oct 2026 02:05:05 PM

ಮಂಗಳೂರು: ಹೊಸ ತಿಂಗಳ ಆರಂಭದಲ್ಲೇ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಅಕ್ಟೋಬರ್ 1ರಿಂದ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್‌ಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ.

 

ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ LPG ಸಿಲಿಂಡರ್ ಬೆಲೆ ₹2,898ಕ್ಕೆ ತಲುಪಿದೆ. ಈ ದರ ಏರಿಕೆಯ ಪರಿಣಾಮ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಬೀಳುವ ಸಾಧ್ಯತೆ ಇದೆ.

 

ಇದರ ನಡುವೆ ಮನೆಗಳಲ್ಲಿ ಅಡುಗೆಗೆ ಬಳಸುವ 14.2 ಕೆಜಿ LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಗೃಹ ಬಳಕೆದಾರರಿಗೆ ಪ್ರಸ್ತುತ ದರವೇ ಮುಂದುವರಿಯಲಿದೆ.

 

ವಾಣಿಜ್ಯ LPGಗೆ ಪರಿಷ್ಕೃತ ಬೆಲೆಗಳು ಅಕ್ಟೋಬರ್ 1ರಿಂದಲೇ ಜಾರಿಗೆ ಬಂದಿವೆ.