06 October 2026 |

ಮಣಿಪಾಲದಲ್ಲಿ QR ಕೋಡ್ ಬದಲಿಸಿ ₹12 ಲಕ್ಷ ವಂಚನೆ ಆರೋಪ; 6 ಮಂದಿ ಬಂಧನ

  • 05 Oct 2026 12:15:38 PM

ಮಣಿಪಾಲದ ಎಂಐಟಿ ಕ್ಯಾಂಪಸ್‌ನಲ್ಲಿ ಬ್ಯಾಟರಿ ವಾಹನ ಸೇವೆಯ ಮೂಲಕ ಸಂಗ್ರಹವಾಗುತ್ತಿದ್ದ ಹಣವನ್ನು ಅಕ್ರಮವಾಗಿ ಬೇರೆ ಖಾತೆಗೆ ವರ್ಗಾಯಿಸಿದ ಆರೋಪದ ಪ್ರಕರಣ ಬೆಳಕಿಗೆ ಬಂದಿದೆ.

 

ಪ್ರಯಾಣಿಕರಿಂದ ಹಣ ಪಾವತಿಸಲು ಬಳಸುತ್ತಿದ್ದ ಅಧಿಕೃತ QR ಕೋಡ್ ಬದಲಿಗೆ ಮತ್ತೊಂದು QR ಕೋಡ್ ಅಳವಡಿಸಿ, ಅದರ ಮೂಲಕ ಹಣವನ್ನು ಬೇರೆ ಖಾತೆಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಈ ರೀತಿಯಲ್ಲಿ ಸುಮಾರು ₹12 ಲಕ್ಷ ಹಣ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

ಅಕ್ಟೋಬರ್ 2ರಂದು ಈ ಕುರಿತು ದೂರು ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

 

ಹಣದ ವಹಿವಾಟು, ಬಳಸಲಾದ ಖಾತೆಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರ ಸಂಪರ್ಕಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.