06 October 2026 |

ಬಂಟ್ವಾಳದಲ್ಲಿ ಸಿಡಿಲಿನ ಆರ್ಭಟ; ಮನೆಗೆ ಭಾರೀ ಹಾನಿ, ಮಹಿಳೆ ಆಸ್ಪತ್ರೆಗೆ

  • 05 Oct 2026 02:01:24 PM

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಅನಿಲದಡ್ಡದಲ್ಲಿ ಸೋಮವಾರ ಮುಂಜಾನೆ ಸಿಡಿಲು ಬಡಿದು ಮನೆಯೊಂದಕ್ಕೆ ಭಾರೀ ಹಾನಿಯಾಗಿದೆ.

 

ಸುಮಾರು ಬೆಳಗ್ಗೆ 4 ಗಂಟೆ ವೇಳೆಗೆ ನಗೇಶ್ ಕುಲಾಲ್ ಅವರ ಮನೆಗೆ ಸಿಡಿಲು ಅಪ್ಪಳಿಸಿದೆ ಎನ್ನಲಾಗಿದೆ. ಪರಿಣಾಮ ಮನೆಯ ಹೆಂಚುಗಳು, ಬಾಗಿಲು, ಕಿಟಕಿ ಗಾಜು ಸೇರಿದಂತೆ ಹಲವು ಭಾಗಗಳು ಹಾನಿಗೊಳಗಾಗಿವೆ.

 

ಸಿಡಿಲಿನ ಘಟನೆ ಬಳಿಕ ನಗೇಶ್ ಅವರ ಪತ್ನಿ ಕುಶಾಲಾ ಅಸ್ವಸ್ಥರಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಸೋಮವಾರ ಮುಂಜಾನೆ ಗುಡುಗು-ಸಿಡಿಲಿನೊಂದಿಗೆ ಭಾರೀ ಮಳೆಯಾಗಿದ್ದು, ಕೆಲವೆಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.