ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನವೆಂಬರ್ 1ರಿಂದ ಆಟೋರಿಕ್ಷಾ ಪ್ರಯಾಣ ದರದಲ್ಲಿ ಪರಿಷ್ಕರಣೆ ಜಾರಿಗೆ ಬರಲಿದೆ.
ಹೊಸ ದರದಂತೆ, ಮೊದಲ 1.5 ಕಿಲೋಮೀಟರ್‌ಗಳ ಪ್ರಯಾಣಕ್ಕೆ ಕನಿಷ್ಠ ₹40 ಪಾವತಿಸಬೇಕಾಗುತ್ತದೆ. ಅದಾದ ಬಳಿಕ ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ₹23 ದರ ನಿಗದಿಯಾಗಿದೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸಾಮಾನ್ಯ ದರಕ್ಕಿಂತ 1.5 ಪಟ್ಟು ಶುಲ್ಕ ವಿಧಿಸಲು ಆಟೋ ಚಾಲಕರಿಗೆ ಅವಕಾಶ ನೀಡಲಾಗಿದೆ.
ಪರಿಷ್ಕೃತ ದರ ಜಾರಿಯಾಗುವ ಹಿನ್ನೆಲೆಯಲ್ಲಿ ಎಲ್ಲಾ ಆಟೋರಿಕ್ಷಾಗಳಲ್ಲಿ ಹೊಸ ದರಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಜೊತೆಗೆ, ಹೊಸ ದರಕ್ಕೆ ಅನುಗುಣವಾಗಿ ಆಟೋ ಮೀಟರ್‌ಗಳನ್ನು ಮರುಹೊಂದಿಸುವಂತೆ ಸೂಚಿಸಲಾಗಿದೆ.





