07 October 2026 |

ಉಡುಪಿಯಲ್ಲಿ ತೆಂಗು ಬೆಳೆಗಾರರಿಗೆ ಹೊಸ ಸಂಕಷ್ಟ; ತೆಂಗಿನ ಮರಗಳಿಗೆ ಕೀಟಬಾಧೆ ಹೆಚ್ಚಳ

  • 06 Oct 2026 06:31:49 PM

ಉಡುಪಿ: ಜಿಲ್ಲೆಯ ಹಲವು ಪ್ರದೇಶಗಳಲ್ಲಿ ತೆಂಗಿನ ಮರಗಳಿಗೆ ಕಪ್ಪು ತಲೆಯ ಹುಳು ಹಾಗೂ ಕೆಂಪು ತಾಳೆ ಹುಳುಗಳ ಬಾಧೆ ಹೆಚ್ಚಾಗಿದೆ.

 

ಕುಂದಾಪುರ ಮತ್ತು ಬೈಂದೂರು ತಾಲ್ಲೂಕಿನ ಹಲವು ಭಾಗಗಳಲ್ಲಿ ಕೀಟಗಳ ಹಾವಳಿಯಿಂದ ತೆಂಗಿನ ಮರಗಳು ಹಾನಿಗೊಳಗಾಗಿವೆ.

 

ಬೈಂದೂರಿನ ಹದವು ಗ್ರಾಮದ ಅತ್ತಿಕೋಣೆ, ಪಡುಕೋಣೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.

 

ವಿಷಯ ತಿಳಿದು ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಮರಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದೆ. ಇದೇ ವೇಳೆ ರೈತರಿಗೆ ಕೀಟಗಳ ನಿಯಂತ್ರಣ ಹಾಗೂ ತೆಂಗಿನ ಮರಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಿದೆ.