08 October 2026 |

ರಾಹುಲ್ ಗಾಂಧಿ ವಿಡಿಯೋಗೆ ಭರ್ಜರಿ ವೈರಲ್; ‘Led Zeppelin’ ಹಾಡಿಗೆ ನೆಟ್ಟಿಗರ ಗಮನ

  • 07 Oct 2026 03:01:38 PM

ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬ್ಯಾರಿಕೇಡ್ ಮೇಲೆ ನಿಂತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ.

 

ಈ ದೃಶ್ಯವನ್ನು ಒಳಗೊಂಡಿರುವ Instagram Reelಗೆ ‘Led Zeppelin’ ಬ್ಯಾಂಡ್‌ನ ಸಂಗೀತವನ್ನು ಬಳಸಲಾಗಿದ್ದು, ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ವಿಡಿಯೋಗೆ ಸಾಕಷ್ಟು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಬಳಕೆದಾರರ ಗಮನ ಸೆಳೆದಿದೆ.

 

ಅಕ್ಟೋಬರ್ 6ರಂದು ದೆಹಲಿಯಲ್ಲಿ INDIA ಬ್ಲಾಕ್‌ನ ನಾಯಕರು ಚುನಾವಣಾ ಆಯೋಗದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಬ್ಯಾರಿಕೇಡ್ ಮೇಲೆ ನಿಂತಿದ್ದ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು.