10 October 2026 |

ಆಯುರ್ವೇದ ವೈದ್ಯಕೀಯ ಪದವಿ (BAMS) ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಪ್ರಜ್ಞಾ

  • 09 Oct 2026 05:21:14 PM

ಕಜೆಕಾರು: ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಅವರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ BAMS ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನೊಂದಿಗೆ ತೇರ್ಗಡೆಯಾಗಿದ್ದಾರೆ.

 

ಇವರು ತೆಂಕ ಕಜೆಕಾರು ನಿವಾಸಿಗಳಾದ ಶ್ರೀಮತಿ ಉಮಾವತಿ ಮತ್ತು ಶ್ರೀ ಗುಣಶೇಖರ ಪೂಜಾರಿ (ಸಮೃದ್ಧಿ ಕೊಡಂಗೆ) ದಂಪತಿಯ ಪುತ್ರಿ.

 

ಪ್ರಜ್ಞಾ ಅವರ ಈ ಸಾಧನೆಗೆ ಕುಟುಂಬದವರು, ಬಂಧುಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.