14 October 2026 |

33 ಕೊರಗ ಕುಟುಂಬಗಳಿಗೆ ಭೂಪತ್ರ, ನಿವೇಶನ ನೀಡಲು ಒತ್ತಾಯ: ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ

  • 13 Oct 2026 08:16:13 AM

ಮಂಗಳೂರು: ಮಂಗಳಜ್ಯೋತಿ–ವಾಮಂಜೂರು ವ್ಯಾಪ್ತಿಯ 33 ಕೊರಗ ಸಮುದಾಯದ ಫಲಾನುಭವಿಗಳಿಗೆ ಭೂಪತ್ರ ಹಾಗೂ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

 

ಮಂಗಳಜ್ಯೋತಿಯಿಂದ ಆರಂಭವಾದ ಮೆರವಣಿಗೆಯು ಕುಲಶೇಖರ, ನಂತೂರು ಮತ್ತು ಪಂಪ್‌ವೆಲ್ ಮಾರ್ಗವಾಗಿ ಪಡೀಲ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿತು. ಈ ವೇಳೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

 

ಭೂಹಕ್ಕಿಗೆ ಸಂಬಂಧಿಸಿದಂತೆ ಇನ್ನೂ ಬಗೆಹರಿಯದೆ ಉಳಿದಿರುವ ಸಮಸ್ಯೆಗಳನ್ನು ವಿಳಂಬ ಮಾಡದೆ ಪರಿಹರಿಸಬೇಕು. 33 ಫಲಾನುಭವಿಗಳಿಗೆ ಭೂಪತ್ರ ಮತ್ತು ನಿವೇಶನ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.