22 October 2026 |

ಉಳ್ಳಾಲ: ಪಿಕ್‌ಅಪ್ ವಾಹನ–ಬೈಕ್ ಅಪಘಾತ ಪ್ರಕರಣ; ಇಬ್ಬರು ಯುವಕರ ಸಾವು, ಚಾಲಕ ಬಂಧನ

  • 22 Oct 2026 08:34:14 AM

ಉಳ್ಳಾಲ: ಬೋಳಿಯಾರ್‌ನಲ್ಲಿ ಪಿಕ್‌ಅಪ್ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಘಟನೆಯಲ್ಲಿ ಮಹಮ್ಮದ್ ಜುನೈದ್ (23) ಹಾಗೂ ಮಹಮ್ಮದ್ ಅಫ್ರಾಝ್ (23) ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

 

ಪ್ರಕರಣದ ಆರೋಪಿಯಾಗಿರುವ ಬೋಳಿಯಾರ್ ನಿವಾಸಿ ಹಫೀಸ್‌ನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.