04 November 2025 | Join group

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ: ಇನ್ನೂ ಮೂವರು ಬಂಧನ, ಉಳಿದ ಆರೋಪಿಗಳಿಗಾಗಿ ಹುಡುಕಾಟ!

  • 15 May 2025 12:37:51 AM

ಮಂಗಳೂರು, ಮೇ 15: ಸುಹಾಸ್ ಕೊ*ಲೆ ಪ್ರಕರಣವನ್ನು ಬೆನ್ನು ಹತ್ತಿದ ಪೊಲೀಸರು ಇನ್ನೂ 3 ಮಂದಿಯನ್ನು ಬಂಧಿಸಿದ್ದಾರೆ. ಬಿಜೆಪಿ ಮತ್ತು ಇನ್ನಿತರ ಹಿಂದೂಪರ ಸಂಘ ಸಂಸ್ಥೆಗಳ ಆರೋಪದಂತೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊ*ಲೆಯಲ್ಲಿ ಹಲವರ ಪಾಲ್ಗೊಳ್ಳುವಿಕೆ ಬಗ್ಗೆ ಸಂಶಯ ವ್ಯಕ್ತಪಡಿಸಿದ ಬೆನ್ನಲ್ಲೇ ಪೊಲೀಸರು ಇಂದು 3 ಜನ ಕೊ*ಲೆಯಲ್ಲಿ ನೇರವಾಗಿ ಬಾಗಿಯಾಗಿರುವರನ್ನು ಸೆರೆಹಿಡಿದಿದ್ದಾರೆ.

 

ಬಂಧಿತ ಆರೋಪಿಗಳನ್ನು ಮಂಗಳೂರು ಕಳವಾರು ಗ್ರಾಮದ ಆಶ್ರಯ ಕಾಲೋನಿ ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್ ಅಲಿಯಾಸ್ ಯಾನೆ ಅಜ್ಜು (29) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಉಡುಪಿ ಜಿಲ್ಲೆ ಕಾಪು ಬೆಳಪು ಬದ್ರಿಯಾ ನಗರದ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್ ನೌಫಲ್ (24), ಪ್ರಸ್ತುತ ಮಂಗಳೂರಿನ ಬಜ್ಪೆಯಲ್ಲಿ ನೆಲೆಸಿದ್ದಾನೆ ಮತ್ತು ಮೂರನೆಯವ ಬಂಟ್ವಾಳ ತಾಲೂಕಿನ ಫರಂಗಿಪೇಟೆ ನಿವಾಸಿ ನೌಶಾದ್ ಅಲಿಯಾಸ್ ವಾಮಂಜೂರು ನೌಶಾದ್ ಅಲಿಯಾಸ್ ಚೊಟ್ಟೆ ನೌಶಾದ್ (39), ಪ್ರಸ್ತುತ ಹಾಸನ ಜಿಲ್ಲೆಯ ಕೆ ಆರ್ ಪುರಂನಲ್ಲಿ ವಾಸವಾಗಿದ್ದಾನೆ.

 

ಅಜರುದ್ದೀನ್ ಸುಹಾಸ್ ಶೆಟ್ಟಿಯ ಚಲನವಲನಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಮಾಹಿತಿಯನ್ನು ಕೊ*ಲೆಗಾರರಿಗೆ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಲಾಗಿದೆ. ಈತನ ವಿರುದ್ಧ ಪಣಂಬೂರು, ಸುರತ್ಕಲ್ ಮತ್ತು ಮೂಲ್ಕಿ ಪೊಲೀಸ್ ಠಾಣೆಗಳಲ್ಲಿ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

 

ಅಬ್ದುಲ್ ಖಾದರ್ ಅಲಿಯಾಸ್ ನೌಫಲ್, ಕೊ*ಲೆ ನಡೆದ ನಂತರ ಪ್ರಮುಖ ಆರೋಪಿಗಳು ಕಾರಿನಲ್ಲಿ ಅಪರಾಧ ಸ್ಥಳದಿಂದ ಪರಾರಿಯಾಗಲು ಸಹಾಯ ಮಾಡಿದ್ದಾನೆ ಎನ್ನಲಾಗಿದೆ.

 

ನೌಶಾದ್ ಅಲಿಯಾಸ್ ವಾಮಂಜೂರು ನೌಶಾದ್ ಅಲಿಯಾಸ್ ಚೊಟ್ಟೆ ನೌಶಾದ್ ಇತರರೊಂದಿಗೆ ಸಂಚು ರೂಪಿಸಿ ನೇರವಾಗಿ ಹ*ತ್ಯೆಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದ್ದು ಈತನ ವಿರುದ್ಧ ಕೊ*ಲೆ ಮತ್ತು ಕೊ*ಲೆಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಸುರತ್ಕಲ್, ಬಜ್ಪೆ, ಮೂಡುಬಿದಿರೆ, ಮಂಗಳೂರು ಉತ್ತರ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಆರು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ. ಇದನ್ನೂ ಓದಿ ಬಂಟ್ವಾಳ : ಲೋಕಾಯುಕ್ತ ದಾಳಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಇಬ್ಬರು ಖಜಾನ ಸಿಬ್ಬಂದಿ - ದಸ್ತಗಿರಿ

 

ಬಂಧಿತ ವ್ಯಕ್ತಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಪ್ರಮುಖ ಪಾತ್ರ ವಹಿಸಿದ್ದ ಅಜರುದ್ದೀನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ಹೆಚ್ಚಿನ ತನಿಖೆಗಾಗಿ ಪೊಲೀಸರು ಅಬ್ದುಲ್ ಖಾದರ್ ಮತ್ತು ನೌಶಾದ್‌ನನ್ನು ಏಳು ದಿನಗಳ ಕಸ್ಟಡಿಗೆ ಪಡೆದಿದ್ದಾರೆ.

 

ಮೇ 1 ರ ಸಂಜೆ ಸುಹಾಸ್ ಶೆಟ್ಟಿ ಯನ್ನು ಬಜ್ಪೆ ಪಕ್ಕ ಬರ್ಬರವಾಗಿ ಕೊ*ಲೆಮಾಡಲಾಗಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು 8 ಬಂಧಿಸಿದ್ದರು. ಇದರ ಜೊತೆಗೆ ಇಂದು 3 ಜನರನ್ನು ಬಂಧಿಸಿದ್ದು ಒಟ್ಟು ಬಂಧಿತರ ಸಂಖ್ಯೆ 11 ಕ್ಕೆ ಏರಿದೆ.

 

ಸುಹಾಸ್ ಶೆಟ್ಟಿ ಹತ್ಯೆಯ ತನಿಖೆ ಮುಂದುವರೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಸುಳ್ಳು, ಬೆದರಿಕೆಯ ಸಂದೇಶ ಕಳುಹಿಸುವವರಿಗೆ ಎಚ್ಚರಿಕೆ - ಶಿಕ್ಷೆಯ ವಿವರ ಪ್ರಕಟಿಸಿದ ಪೊಲೀಸ್ ಆಯುಕ್ತರು