ಮಂಗಳೂರು: ಕರಾವಳಿಯಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ.
ನವೆಂಬರ್ 1ರ ಮಧ್ಯರಾತ್ರಿ ಮೀನುಗಾರಿಕಾ ದೋಣಿ 'ಶಿವ ಸಾಗರ'ದಿಂದ ಭಾರತೀಯ ಕೋಸ್ಟ್ ಗಾರ್ಡ್‌ಗೆ ತುರ್ತು ಸಂದೇಶ ರವಾನೆಯಾಗಿತ್ತು. ಮಾಹಿತಿ ದೊರೆಯುತ್ತಿದ್ದಂತೆ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ, ರಕ್ಷಣಾ ನೌಕೆಯ ನೆರವಿನಿಂದ ಸಮುದ್ರದಲ್ಲಿ ಬಿದ್ದಿದ್ದ ಮೀನುಗಾರನನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಕ್ಷಣೆಯ ಬಳಿಕ ಮೀನುಗಾರನಿಗೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯರಾತ್ರಿ ಸಮುದ್ರದಲ್ಲಿ ನಡೆದ ತುರ್ತು ಕಾರ್ಯಾಚರಣೆಯಿಂದ ಮೀನುಗಾರನ ಜೀವ ಉಳಿದಿದೆ.





