11 November 2026 |

ಕಾರು ಹಿಂದಕ್ಕೆ ತೆಗೆಯುವ ವೇಳೆ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

  • 11 Nov 2026 05:14:56 PM

ಸುಳ್ಯ: ಕಾರನ್ನು ಹಿಂದಕ್ಕೆ ಚಲಾಯಿಸುವ ಸಂದರ್ಭದಲ್ಲಿ ಕಾರಿನ ಚಕ್ರದಡಿ ಸಿಲುಕಿ 46 ವರ್ಷದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕಸಬಾ ಗ್ರಾಮದ ದುಗಲಡ್ಕದಲ್ಲಿ ಬುಧವಾರ ನಡೆದಿದೆ.

 

ಮೃತ ಮಹಿಳೆಯನ್ನು ಕಮಾರುನ್ನಿಸಾ (46) ಎಂದು ಗುರುತಿಸಲಾಗಿದೆ. ಅವರು ರಬ್ಬರ್ ತೋಟಕ್ಕೆ ತೆರಳಿ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

 

ಘಟನೆಯ ಬಳಿಕ ಮೃತದೇಹವನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.