14 November 2026 |

ಬಂಟ್ವಾಳ: ಅನಾರೋಗ್ಯದಿಂದ 29 ವರ್ಷದ ಯುವತಿ ನೇಹಾ ನಿಧನ

  • 13 Nov 2026 11:25:54 AM

ಬಂಟ್ವಾಳ: ಪಾಣೆಮಂಗಳೂರು–ಮೆಲ್ಕಾರ್‌ನ ಸ್ವರಾಜ್ ಸ್ಟುಡಿಯೋ ಮಾಲಕ ರಾಜರತ್ನ ಅವರ ಪುತ್ರಿ ನೇಹಾ (29) ಅವರು ಅನಾರೋಗ್ಯದ ಕಾರಣ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.

 

ಕಳೆದ ಒಂದು ವರ್ಷದಿಂದ ತಲೆಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ನೇಹಾ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ವೈದ್ಯರ ನಿರಂತರ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

 

ನೇಹಾ ಅವರು ತಮ್ಮ ಪತಿ ಪ್ರತೀಕ್ ಅವರೊಂದಿಗೆ ಉದ್ಯೋಗದ ನಿಮಿತ್ತ ಕುವೈತ್‌ನಲ್ಲಿ ವಾಸವಾಗಿದ್ದರು. ಮೃತರ ಅಂತಿಮ ವಿಧಿವಿಧಾನಗಳನ್ನು ಬಿ.ಸಿ.ರೋಡಿನ ಮಯ್ಯರಬೈಲಿನಲ್ಲಿರುವ ಅವರ ಪತಿಯ ಮನೆಯಲ್ಲಿ ನೆರವೇರಿಸಲಾಯಿತು.