ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ತುಂಬೆ ಸಮೀಪದಲ್ಲಿರುವ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾವನ್ನು ತೆರವುಗೊಳಿಸುವಂತೆ ಆಗ್ರಹಿಸಿ SDPI ಕಾರ್ಯಕರ್ತರು ಪ್ರತಿಭಟನೆ ನಡೆಸಿ ಟೋಲ್ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದಾರೆ.
ಉಪ್ಪಿನಂಗಡಿ ಸಮೀಪದ ವಳಾಲು ಪ್ರದೇಶದಲ್ಲಿ ಹೊಸ ಟೋಲ್ ಕೇಂದ್ರ ಆರಂಭಗೊಂಡಿದ್ದು, ಅದು ಕಾರ್ಯಾರಂಭ ಮಾಡಿದ ಬಳಿಕ ಬ್ರಹ್ಮರಕೂಟ್ಟು ಟೋಲ್ ಪ್ಲಾಜಾವನ್ನು ಮುಚ್ಚಲಾಗುವುದು ಎಂದು ಈ ಹಿಂದೆ ತಿಳಿಸಲಾಗಿತ್ತು. ಆದರೆ ಹೊಸ ಟೋಲ್ ಕೇಂದ್ರ ಆರಂಭವಾದರೂ ಬ್ರಹ್ಮರಕೂಟ್ಟಿನ ಟೋಲ್ ಸಂಗ್ರಹ ಮುಂದುವರಿದಿರುವುದಕ್ಕೆ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಟೋಲ್ ತೆರವುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ SDPI ಕಾರ್ಯಕರ್ತರು ಏಕಾಏಕಿ ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.





