26 July 2025 | Join group

ಪಾಕಿಸ್ತಾನದ ಪರ ನಿಂತ ಟರ್ಕಿ ಯ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ : ಸಾವಿರಾರು ಕೋಟಿ ನಷ್ಟ

  • 23 May 2025 04:52:23 PM

ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಭೀತಿ ಎದುರಾದ ಸಂದರ್ಭದಲ್ಲಿ, ಪಾಕಿಸ್ತಾನ ಪರ ನಿಂತ ಮೊದಲ ದೇಶ ಅದುವೇ ಟರ್ಕಿ. ಪಾಕಿಸ್ತಾನಕ್ಕೆ ಬೆಂಬಲವಾಗಿ ಹೇಳಿಕೆ ನೀಡುವುದರ ಜೊತೆಗೆ ತನ್ನಲ್ಲಿದ್ದ ಯುದ್ಧ ಸಾಮಗ್ರಿಗಳನ್ನು ಸಹ ಕಳುಹಿಸಿದ ಮೊದಲ ದೇಶ ಟರ್ಕಿ. 

 

ಆದರೆ ಇದೀಗ ಟರ್ಕಿ ಗೆ ಭಾರತದ ಜನ ಸರಿಯಾದ ಪಾಠ ಕಳಿಸಿದ್ದಾರೆ. ಪಾಕಿಸ್ತಾನದ ಬೆಂಬಲಕ್ಕೆ ನಿಂತ ಟರ್ಕಿಗೆ ಭಾರತೀಯರು ನೀಡಿದ ಅಘಾತ ತೀವ್ರವಾಗಿ ತಟ್ಟಿದೆ. ಟರ್ಕಿ ದೇಶಕ್ಕೆ ಬಹಿಷ್ಕಾರ ಹಾಕಿ ತಮ್ಮ ಸೇಡು ತೀರಿಸಲು ಭಾರತದ ಜನತೆಯ 'ಬಾಯ್ಕಾಟ್(boycott) ಟರ್ಕಿ' ಎನ್ನುವ ಸಂದೇಶ ಇಂಟರ್ನೆಟ್ ನಲ್ಲಿ ಬಹಳಷ್ಟು ಹರಿದಾಡುತ್ತಿದೆ.

 

ಭಾರತದ ಪ್ರವಾಸಿಗರು ಟರ್ಕಿ ದೇಶಕ್ಕೆ ಮುಂಗಡ ಬುಕಿಂಗ್ ಮಾಡಿದ್ದ ಟಿಕೆಟ್ ಗಳನ್ನು ರದ್ದುಗೊಳಿಸುತ್ತಿರುವುದು ಟರ್ಕಿ ದೇಶದ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ. ಭಾರತೀಯರ ಈ ನಿರ್ಧಾರದಿಂದಾಗಿ 300 ಮಿಲಿಯನ್ ಪೌಂಡ್ ಗಳ ನಷ್ಟ ಅನುಭವಿಸಿದೆ.

 

ಭಾರತೀಯ ಕರೆನ್ಸಿ ಲೆಕ್ಕಚಾರದಲ್ಲಿ 3466 ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ದೇಶಕ್ಕೆ ಪ್ರವಾಸಗಳನ್ನು ರದ್ದುಗೊಳಿಸುವ ಭಾರತೀಯರ ಸಂಖ್ಯೆ ಶೇಕಡಾ 250 ಕ್ಕಿಂತ ಹೆಚ್ಚಾಗಿದೆ ಎಂದು ವರದಿಯಾಗಿದೆ.

 

ಇನ್ನೂ ಶ್ರೀಮಂತ ಭಾರತೀಯರು ಅಲ್ಲಿ ತಮ್ಮ ಮದುವೆ ಪ್ಲಾನ್ ಬದಲಾಯಿಸುತ್ತಿರುವುದರಿಂದ 770 ಕೋಟಿ ರೂಗಳಷ್ಟು ನಷ್ಟವಾಗಿದೆ ಎನ್ನಲಾಗಿದೆ. ಈ ಎಲ್ಲಾ ನಷ್ಟ ಟರ್ಕಿ ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಹೇಳಲಾಗಿದೆ.

 

ಇದನ್ನೂ ಓದಿ : ಟರ್ಕಿಗೆ ದೇಶಕ್ಕೆ ತಕ್ಕ ಪಾಠ ಕಲಿಸುತ್ತಿರುವ ಭಾರತೀಯರು : ನಮ್ಮಲ್ಲಿಗೆ ಬನ್ನಿ ಎಂದು ಕೈ ಮುಗಿದು ಬೇಡಿಕೊಂಡ ಟರ್ಕಿ !