28 July 2025 | Join group

ಬಂಟ್ವಾಳ ಅಬ್ದುಲ್ ರಹಿಮಾನ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 5 ಜನರ ಬಂಧನ

  • 30 May 2025 05:53:25 PM

ಬಂಟ್ವಾಳ: ಬಂಟ್ವಾಳದ ಕೊಳತಮಜಲ್ ಅಬ್ದುಲ್ ರಹಿಮಾನ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 3 ಜನರನ್ನು ಬಂಧಿಸಿದ್ದ ಪೊಲೀಸರು ಈಗ ಮತ್ತಿಬ್ಬರ ಬಂಧನ ನಡೆಸಿದ್ದಾರೆ. ಇದರಿಂದ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 5 ಜನರ ಬಂಧನವಾಗಿದೆ.

 

ಮೇ 27 ರಂದು ನಡೆದ ಈ ಹತ್ಯೆ ಪ್ರಕರಣ ಕೇವಲ 3 ದಿನಗಳಲ್ಲಿ 5 ಜನರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಒಟ್ಟು 15 ಜನ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಸಿನಲ್ಲಿ ದಾಖಲಿಸಲಾಗಿದೆ. ಈ ಹತ್ಯೆ ಹಳೆ ದ್ವೇಷಕ್ಕಾಗಿ ಈ ಕೃತ್ಯ ನಡೆದಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 

ಬಂಟ್ವಾಳದ ಕುರಿಯಾಳ ನಿವಾಸಿ ದೀಪಕ್, ಅಮ್ಮುಂಜೆ ನಿವಾಸಿ ಪೃಥಿರಾಜ್, ಚಿಂತನ್, ಸುಮಿತ್, ರವಿರಾಜ್ ಬಂಧಿತ ಆರೋಪಿಗಳು.

 

ಬಂಟ್ವಾಳ ಡಿವೈಎಸ್ಪಿ ವಿಜಯ್ ಪ್ರಸಾದ್ ನೇತೃತ್ವದಲ್ಲಿ 5 ತಂಡಗಳನ್ನು ರಚನೆ ಮಾಡಿ, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.