ಬಂಟ್ವಾಳ, ಕಲ್ಲಡ್ಕ : ಬಹು ನಿರೀಕ್ಷೆಯ ಕಲ್ಲಡ್ಕ ಫ್ಲೈ ಓವರ್ ನ ಉದ್ಘಾಟನೆ ಜೂನ್ 02 ರಂದು ಕಲ್ಲಡ್ಕ ಭಾಗದ ಗಣ್ಯರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಇಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಸ್ವಯಂ ಸೇವಾ ಸಂಘದ(RSS) ನ ಮುಖಂಡರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರು ಉದ್ಘಾಟನೆಯನ್ನು ಮಾಡಿದ್ದಾರೆ.
ದ.ಕ ಸಂಸದರು ಕ್ಯಾ. ಬೃಜೇಶ್ ಚೌಟ ಮತ್ತು ಕೆ.ಏನ್.ಆರ್.ಸಿ ಕಂಪನಿ ನೀಡಿದ ಭರವಸೆಗೆ ಅನುಗುಣವಾಗಿ ಇಂದು ಪ್ರಯಾಣಿಕರಿಗೆ ಫ್ಲೈ ಓವರ್ ನ ಒಂದು ಪಾಶ್ವದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸರಿಸುಮಾರು 2.1 ಕಿ.ಮೀ ಉದ್ದದ ಮೇಲ್ಸೇತುವೆ ರಸ್ತೆ ದೇಶದಲ್ಲೇ ಅತಿ ಉದ್ದದ ರಸ್ತೆಯ ಪಟ್ಟಿಗೆ ಸೇರಿದೆ.
ವಿಶೇಷವೆಂದರೆ, ನೂತನವಾಗಿ ನಿರ್ಮಿಸಲಾದ ಕಲ್ಲಡ್ಕ ಫ್ಲೈ ಓವರ್ ಗೆ 'ಶ್ರೀ ರಾಮ ಫ್ಲೈ ಓವರ್' ಎಂಬ ಹೆಸರು ನಾಮಕರಣ ಮಾಡಿದ್ದು, ಉದ್ಘಾಟನಾ ಸಂದರ್ಭದಲ್ಲಿ ನೆರೆದವರಿಂದ 'ಭಾರತ್ ಮಾತಾ ಕೀ ಜೈ' ಘೋಷಣೆ ಮೊಳಗಿತ್ತು. ಮಾಜಿ ಶಾಸಕರುಗಳಾದ ಎ. ರುಕ್ಮಯ ಪೂಜಾರಿ ಮತ್ತು ಪದ್ಮನಾಭ ಕೊಟ್ಟಾರಿ, ಬಿಜೆಪಿ ಮುಖಂಡ ಚೆನ್ನಪ್ಪ ಕೋಟ್ಯಾನ್, ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ ಚೆಂಡೆ ಹಾಗೂ ಊರಿನ ಸಮಸ್ತ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉದ್ಘಾಟನೆಯ ಸಂದರ್ಭದಲ್ಲಿ 'ಶ್ರೀರಾಮ ಮೇಲ್ಸೇತುವೆ ಕಲ್ಲಡ್ಕ' ಎನ್ನುವ ಬ್ಯಾನರ್ ಹಿಡಿದು, ಪೂಜಾ ವಿಧಿವಿಧಾನಗಳನ್ನು ನೇರವೇರಿಸಿ ನಂತರ ವಾಹನಗಳ ಸಂಚಾರಕ್ಕೆ ಈ ಫ್ಲೈ ಓವರ್ ನ್ನು ಬಿಟ್ಟು ಕೊಡಲಾಯಿತು.
ಇದೀಗ, ಕಲ್ಲಡ್ಕ, ಉಪ್ಪಿನಂಗಡಿ, ಮಾಣಿ, ಮೆಲ್ಕಾರ್, ಪಾಣೆಮಂಗಳೂರು ಹೊಸ ರಸ್ತೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ವಾಹನ ಸಂಚಾರರು ಕಾಮಗಾರಿ ಸಂದರ್ಭದಲ್ಲಿ ಅನುಭವಿಸಿದ ಕಷ್ಟಗಳಿಗೆ ತೆರೆ ಬಿದ್ದಂತಾಗಿದೆ. ಮುಂದಿನ ವರ್ಷ ಬಿ ಸಿ ರೋಡ್ ನಿಂದ ಎಣ್ಣೆಹೊಳೆವರೆಗೆ ನಿರ್ಮಿಸುತ್ತಿರುವ ಚತುಷ್ಪತ ರಸ್ತೆ ಲೋಕಾರ್ಪಣೆಗೈಯಲಿದೆ.