ಪುತ್ತೂರು : ಬಿಜೆಪಿ ಮುಖಂಡ ಹಾಗೂ ಪ್ರಬಲ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ಅವರಿಗೆ ಪೊಲೀಸರಿಂದ ಗಡಿಪಾರು ನೋಟಿಸು ಜಾರಿ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಉದ್ವಿಗ್ನತೆಯ ವಾತಾವರಣ ಇರುವುದರಿಂದ ಹಿಂದೂ ಮುಖಂಡರ ವಿರುದ್ಧ ಪೊಲೀಸರು ಕಠಿಣ ಕ್ರಮ ಆರಂಭಿಸಿದ್ದಾರೆ.
ಇದಕ್ಕೆ ಸಾಕ್ಷಿಯಂತೆ ಪುತ್ತೂರಿನ ಬಿಜೆಪಿ ಮುಖಂಡರನ್ನು ಕುಮಾರ್ ಪುತ್ತಿಲ ಅವರಿಗೆ ಗಡಿಪಾರ ನೋಟಿಸು ಕೊಟ್ಟಿದ್ದು ಗಡಿಪಾರು ಯಾವ ಕಾರಣಕ್ಕೆ ಎಂಬುದನ್ನು ಉಲ್ಲೇಖಿಸಿಲ್ಲ.
ಜೂನ್ 6 ರಂದು ಈ ಬಗ್ಗೆ ವಿಚಾರಣೆ ನಡೆಯಲಿದ್ದು ವಕೀಲರ ಜೊತೆ ಅಥವಾ ಖುದ್ದಾಗಿ ಪೊಲೀಸ್ ಠಾಣೆಗೆ ಹಾಜರಾಗಬೇಕೆಂದು ಪುತ್ತೀಲರವರಿಗೆ ತಿಳಿಸಲಾಗಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ 1963 ಕಲಂ 58 ರ ಅಡಿಯಲ್ಲಿ ನೋಟೀಸು ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ ಎಂದು ನೋಟಿಸಿನಲ್ಲಿ ನಮೂದಿಸಲಾಗಿದೆ.