ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ RCB ತಂಡದ ಐಪಿಎಲ್ 2025 ರ ವಿಜಯೋತ್ಸವ ಸಂಭ್ರಮದಲ್ಲಿ ಸಾವನ್ನಪ್ಪಿದ ಮೃತರ ಪ್ರತಿ ಕುಟುಂಬಗಳಿಗೆ ಒಟ್ಟು 40 ಲಕ್ಷ ರೂಪಾಯಿಗಳ ಪರಿಹಾರ ದೊರೆಯಲಿದೆ.
ನಿನ್ನೆ ರಾಜ್ಯದ ಮುಖ್ಯಮಂತ್ರಿ ಮೊದಲು ಘೋಷಣೆ ಮಾಡಿದ್ದ ಮೊತ್ತವಾದ 10 ಲಕ್ಷ ರೂ. ವನ್ನು ನಿನ್ನೆ ಸಂಜೆ ಇದ್ದಕ್ಕಿದಂತೆ ಮೃತರ ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ನೀಡುವುದೆಂದು ಘೋಷಿಸಿದರು. ಈ ಬಗ್ಗೆ ಅವರು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
ಆ ಮೂಲಕ ದುರಂತದಲ್ಲಿ ಮೃತರಾದ 11 ಕುಟುಂಬಗಳಿಗೆ ರಾಜ್ಯ ಸರಕಾರ, RCB ಫ್ರ್ಯಾಂಚೈಸ್ ಮತ್ತು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಸೇರಿ ಒಟ್ಟು 40 ಲಕ್ಷ ರೂ ಪರಿಹಾರ ಸಿಗಲಿದೆ.
ಕರ್ನಾಟಕ ಸರಕಾರ ತಲಾ 25 ಲಕ್ಷ ರೂ, RCB ಕಡೆಯಿಂದ 10 ಲಕ್ಷ ರೂ. ಮತ್ತು KSCA ಯಿಂದ 5 ಲಕ್ಷ ರೂ ಮೃತರ ಕುಟುಂಬಗಳಿಗೆ ದೊರೆಯಲಿದೆ.