24 September 2026 |

ಗುಜರಾತ್ ವಿಮಾನ ದುರಂತ : ಮಂಗಳೂರು ಮೂಲದ ಕೋ-ಪೈಲಟ್ ಕ್ಲೈವ್ ಕುಂದರ್ ನಿಧನ

  • 12 Jun 2025 06:26:47 PM

ಜೂನ್ 12, ಗುರುವಾರ ನಡೆದ ಗುಜರಾತಿನ ಅಹ್ಮದಾಬಾದ್ ಸರ್ದಾರ್ ವಲ್ಲಭಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹತ್ತಿರ ನಡೆದ ಭೀಕರ ವಿಮಾನ ದುರಂತದಲ್ಲಿ ಮಂಗಳೂರು ಮೂಲದ ಮುಂಬೈ ನಿವಾಸಿ ಕ್ಲೈವ್ ಕುಂದರ್ ಸಿಬ್ಬಂದಿಯಲ್ಲಿ ಒಬ್ಬರು ಎಂದು ತಿಳಿದು ಬಂದಿದೆ.

 

ಏರ್ ಇಂಡಿಯಾದ ಬೋಯಿಂಗ್ AI- 787 ವಿಮಾನ ಗುಜರಾತ್ ನಿಂದ ಲಂಡನ್ ಗೆ ಹೊರಟಿದ್ದು, ಹತ್ತಿರದ ಮೇಘನಿ ನಗರದ ಹಾಸ್ಟೆಲ್ ಒಂದರಕ್ಕೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ. ಈ ವಿಮಾನ ಮದ್ಯಾಹ್ನ 1:38 ಕ್ಕೆ ಹೊರಟಿದ್ದು, ಕೆಲವೇ ಕ್ಷಣಗಳಲ್ಲಿ ಕೆಳಗಿ ಬಿದ್ದಿತ್ತು.

 

ಕ್ಲೈವ್ ಕುಂದರ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಜೊತೆ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಸಿಬ್ಬಂದಿಗಳು ಮತ್ತು ಪ್ರಯಾಣಿಕರು ಸೇರಿ 242 ಜನರು ಪ್ರಯಾಣಿಸುತ್ತಿದ್ದರು.

 

ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಕೂಡ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದು ಅವರ ದುರ್ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ ಆದರೆ ಯಾವುದೇ ನಿಖರವಾದ ಸಾವು ನೋವುಗಳ ವಿವರ ಇನ್ನಷ್ಟೇ ದೊರೆಯಬೇಕಾಗಿದೆ.