25 June 2026 |

ಹಜ್ ಯಾತ್ರಿಕರನ್ನು ಹೊತ್ತು ಬಂದ ಸೌದಿಯ ವಿಮಾನದಲ್ಲಿ ಕಿಡಿ: ತಪ್ಪಿದ ದುರಂತ

  • 16 Jun 2025 12:23:50 PM

ಉತ್ತರ ಪ್ರದೇಶ: ಲಕ್ನೋ ವಿಮಾನ ನಿಲ್ದಾಣದಲ್ಲಿ ಸೌದಿಯ ವಿಮಾನ ಲ್ಯಾಂಡಿಂಗ್ ಮಾಡುವಾಗ ಎಡ ಬದಿಯ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ದೊಡ್ಡ ದುರಂತವೊಂದು ತಪ್ಪಿದೆ. 

 

ಹಜ್ ಯಾತ್ರಿಕರನ್ನು ಸೌದಿಯ ಜಿದ್ಧಾ ವಿಮಾನ ನಿಲ್ದಾಣದಿಂದ ಹೊತ್ತುಕೊಂಡು ಬರುತ್ತಿದ್ದ ವಿಮಾನ ನಿಲ್ದಾಣ ರಕ್ಷಣಾ ತಂಡದ ತಕ್ಷಣ ಕಾರ್ಯಾಚರಣೆಯಿಂದ ಯಾವುದೇ ಅನಾಹುತಗಳು ಆಗಲಿಲ್ಲ.

 

ವಿಮಾನದಲ್ಲಿ 250 ಯಾತ್ರಿಕರಿದ್ದು, ಲ್ಯಾಂಡಿಂಗ್ ಸಂದರ್ಭದಲ್ಲಿ ಚಕ್ರದಲ್ಲಿ ಕಿಡಿಗಳು ಮತ್ತು ಹೊಗೆ ಬರಲು ಪ್ರಾರಂಭವಾಗಿತ್ತು. ಲ್ಯಾಂಡಿಂಗ್ ಗೇರ್ ನಲ್ಲಿ ಸಣ್ಣ ಹೈಡ್ರಾಲಿಕ್ ಸೋರಿಕೆಯೇ ಕಾರಣ ಎಂದು ಶಂಕಿಸಲಾಗಿದೆ.

 

ವಿಮಾನದ ಪೈಲೆಟ್ ತಕ್ಷಣ ವಾಯು ಸಂಚಾರ ನಿಯಂತ್ರಣಕ್ಕೆ ಮಾಹಿತಿ ನೀಡಿದ್ದಾರೆ. ಆ ಮೂಲಕ ವಿಮಾನ ನಿಲ್ದಾಣ ತಕ್ಷಣ ತಂಡ ಅಗ್ನಿ ಶಾಮಕ ದಳದ ಸಹಾಯದಿಂದ ಫೋಮ್ ಮತ್ತು ನೀರು ಸುರಿಯುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.