ಉಪ್ಪಿನಂಗಡಿ: ಕುಮಾರಧಾರಾ ನದಿಯ 34 ನೆಕ್ಕಿಲಾಡಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ನದಿಯ ದಡದ ಮೇಲೆ ಕುಳಿತ್ತಿದ್ದ ದೊಡ್ಡ ಗಾತ್ರದ ಮೊಸಳೆಯನ್ನು ಸಾರ್ವಜನಿಕರು ಕಂಡು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಸಾರ್ವಜನಿಕರು ಮೊಸಳೆಯ ಪಕ್ಕಕ್ಕೆ ತೆರಳಿ ವಿಡಿಯೋ ಮಾಡುವಾಗ ಸ್ವಲ್ಪ ಸಮಯದವರೆಗೆ ಅಲ್ಲೇ ಕುಳಿತಿತ್ತು. ಆಮೇಲೆ ಒಮ್ಮೆಲೇ ಬಾಯಿ ತೆರೆದು, ನದಿಯ ನೀರಿನ ಒಳಗಡೆ ಹೋದ ದೃಶ್ಯದ ಕಂಡು ಬಂತು.
ಎರಡು ವರ್ಷದ ಹಿಂದೆ ಪಂಜಾಲದಲ್ಲಿ 2 ಮೊಸಳೆ ಕಂಡು ಬಂದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಉಪ್ಪಿನಂಗಡಿ ಬಳಿ ಕುಮಾರಧಾರ ನದಿಯಲ್ಲಿ ಮತ್ತೊಮ್ಮೆ ಮೊಸಳೆ ಕಂಡು ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.
ನದಿಯಲ್ಲಿ ಮೀನು ಹೆಚ್ಚಾಗಿರುವುದರಿಂದ ಮೊಸಳೆ ಮತ್ತು ನೀರು ನಾಯಿ ಬರುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ನೀರು ನಾಯಿಗಳು ಕೂಡ ಪ್ರತ್ಯಕ್ಷವಾಗಿತ್ತೆಂದು ತಿಳಿದುಬಂದಿದೆ.