ಇಸ್ರೇಲ್ ಮತ್ತು ಇರಾನಿನ ಉದ್ದ ದಿನದಿಂದ ದಿನಕ್ಕೆ ತೀವ್ರ ಸ್ವರೂಪಕ್ಕೆ ತೆರಳುತ್ತಿದೆ. ಇದೀಗ ಈ ಯುದ್ಧಕ್ಕೆ ಅಮೇರಿಕಾದ ಪ್ರವೇಶ ಮತ್ತಷ್ಟು ಪರಿಸ್ಥಿತಿಯನ್ನು ಬಿಗುಡಾಯಿಸಿದೆ. ಅಮೇರಿಕಾ ರಾತೋರಾತ್ರಿ ಇರಾನಿನ ಮೂರೂ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ದಾಳಿ ನಡೆಸಿದೆ.
ಈ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ "ಇರಾನ್‌ನ 3 ಪರಮಾಣು ನೆಲೆಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಪಹಾನ್ ಮೇಲೆ ದಾಳಿ ಯಶಸ್ವಿಯಾಗಿದೆ. ಎಲ್ಲಾ ಯುದ್ಧ ವಿಮಾನಗಳು ಸುರಕ್ಷಿತವಾಗಿ ತಮ್ಮ ನೆಲೆಗೆ ಮರಳುತ್ತಿವೆ. ಈಗ ಯುದ್ಧ ವಿಮಾನಗಳು ಇರಾನಿನ ವಾಯುಪ್ರದೇಶ ತೊರೆಯುತ್ತಿವೆ. ಈಗ ಶಾಂತಿಯ ಸಮಯ' ಎಂದು ಪೋಸ್ಟ್ ಮಾಡಿದ್ದಾರೆ.
ಇರಾನ್ ನ ಮೇಲೆ ನಡೆದ ಅಮೇರಿಕಾ ದಾಳಿಯನ್ನು ಇರಾನ್ ಸ್ಥಳೀಯ ಆಡಳಿತ ಕೇಂದ್ರ ದೃಢಪಡಿಸಿದೆ. ಫೋರ್ಡೋ ಮೇಲೆ ಆರು ಅಮೆರಿಕನ್ ಬಾಂಬರ್‌ಗಳು ದಾಳಿ ಮಾಡಿವೆ. ನಟಾಂಜ್ ಮತ್ತು ಎಸ್ಪಹಾನ್ ಮೇಲೆ ಅಮೆರಿಕನ್ ಜಲಾಂತರ್ಗಾಮಿ ನೌಕೆಗಳು 30 ಟೊಮಾಹಾಕ್ ಕ್ಷಿಪಣಿಗಳೊಂದಿಗೆ ದಾಳಿ ನಡೆಸಿದೆ ಎಂದು ತಿಳಿಸಿದೆ.
ಇರಾನ್ ರಾಜಧಾನಿಯಿಂದ 400 ಮೈಲಿನಷ್ಟು ದೂರದಲ್ಲಿ ಈ ದಾಳಿ ನಡೆದಿದೆ. ಆದರೆ ಇರಾನ್ ಮಾತ್ರ ಈ ದಾಳಿಯನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದು 'ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ' ಎಂದು ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.