08 August 2025 | Join group

ಇಸ್ರೇಲ್–ಇರಾನ್ ಯುದ್ಧ ತೀವ್ರ ಗತಿಗೆ: 650ಕ್ಕೂ ಹೆಚ್ಚು ಪ್ರಾಣಹಾನಿ, ಪರಿಸ್ಥಿತಿ ಆತಂಕಕಾರಿ!

  • 22 Jun 2025 05:43:18 PM

ಕಳೆದ 10 ದಿನದಿಂದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ನಡೆಯುತ್ತಿದೆ. ಈಗಾಗಲೇ ಅಮೇರಿಕ ಈ ಯುದ್ಧಕ್ಕೆ ಎಂಟ್ರಿ ಕೊಟ್ಟಿದ್ದು, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅಮೆರಿಕ ನಿನ್ನೆ ರಾತ್ರಿ ಇರಾನ್ ನ ಮೂರು ಪರಮಾಣು ತಾಣಗಳ ಮೇಲೆ ದಾಳಿ ನಡೆಸಿದೆ.

 

ಅಮೇರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆಯು ಒಟ್ಟು ಸಾ*ವುಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಇಲ್ಲಿಯವರೆಗೆ ಇರಾನ್ ನಲ್ಲಿ 657 ಜನರು ಸಾ*ವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಆದರೆ ಇರಾನ್ ನ ಅರೋಗ್ಯ ಸಚಿವಾಲಯವು ಕೇವಲ 430 ನಾಗರಿಕರು ಸಾ*ವನ್ನಪ್ಪಿದ್ದಾರೆ ಎಂದು ತಿಳಿಸಿದೆ.

 

ಇರಾನ್ ಅರೋಗ್ಯ ಸಚಿವಲಾಯದ ಪ್ರಕಾರ, ಇರಾನ್ ನಲ್ಲಿ 3,500 ಜನರು ಗಾಯಗೊಂಡಿದ್ದಾರೆ ಎಂದು ವರದಿ ದೃಢಪಡಿಸಿದೆ. ನಿನ್ನೆ ಜೂನ್ 21 ರವರೆಗೆ ಇಸ್ರೇಲ್ ನಲ್ಲಿ 24 ಜನರು ಸಾ*ವನ್ನಪ್ಪಿದ್ದು, 900ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.