08 August 2025 | Join group

ಜೈಲಿನಿಂದ ಹೊರಬಂದು ಮತ್ತೊಮ್ಮೆ ಲಂಚ ಪಡೆದು ಲೋಕಾಯುಕ್ತಕ್ಕೆ ಸಿಕ್ಕಿಬಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಅಮಾನತು

  • 23 Jun 2025 04:11:46 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಡಿಡಿ ಕೃಷ್ಣವೇಣಿಯವರನ್ನು ಕೆಲಸದಿಂದ ವಜಾಗೊಳಿಸಿ ಭಾನುವಾರ ಆದೇಶ ಹೊರಡಿಸಿದೆ. ಕೃಷ್ಣವೇಣಿ ಲೋಕಾಯುಕ್ತ ದಾಳಿಗೆ 2 ಬಾರಿ ಸಿಕ್ಕಿಹಾಕಿ ಕೊಂಡಿದ್ದು, ಉಳ್ಳಾಲದ ಇರಾ ಗ್ರಾಮದ ವ್ಯಕ್ತಿ ಯೊಬ್ಬರಿಂದ 50,000 ರೂ. ನಗದು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.

 

ಮೊದಲ ಬಾರಿ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 12 ಕೋಟಿ ಆಸ್ತಿ ಪತ್ತೆಯಾಗಿತ್ತು. ಇವರು ಜೈಲಿನಿಂದ ಹೊರ ಬಂದಾಗ ಬುಕೆ ಕೊಟ್ಟು ಸ್ವಾಗತಿಸಿದ ಫೋಟೋ ವೈರಲ್ ಕೂಡ ಆಗಿತ್ತು.

 

ಸರಕಾರದ ನಿಯಮಗಳ ಪ್ರಕಾರ ಯಾವುದೇ ಅಧಿಕಾರ 48 ಗಂಟೆಗಳಿಗಿಂತ ಹೆಚ್ಚಿನ ಸಮಯ ಪೊಲೀಸ್ ಕಸ್ಟಡಿಯಲ್ಲಿದ್ದರೆ, ಅಂತವರನ್ನು ಕೆಲಸದಿಂದ ವಜಾಗೊಳಿಸಲಾಗುತ್ತದೆ ಆದರೆ ಕೃಷ್ಣವೇಣಿಯವರು 18 ದಿನಗಳ ಕಾಲ ಜೈಲಿನಲ್ಲಿದ್ದರೂ ಮತ್ತೆ ತಮ್ಮ ಆಫೀಸ್ ಗೆ ಮರಳಿದ್ದರು.

 

ಜೈಲಿನಿಂದ ಜಾಮೀನು ಪಡೆದು ಬಂದಿದ್ದ ಕೃಷ್ಣವೇಣಿ ಹೈ ಕೋರ್ಟ್ ಮೊರೆ ಹೋಗಿ ತನ್ನ ಅಮಾನತನ್ನು ಅಂಗೀಕರಿಸಬಾರದೆಂದು ಅರ್ಜಿ ಸಲ್ಲಿಸಿದ್ದರು. ಇದೀಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವ ಮೂಲಕ ಕೃಷ್ಣವೇಣಿಯನ್ನು ಹುದ್ದೆಯಿಂದ ಅಮಾನತುಗೊಳಿಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು.

 

ರಾಜ್ಯ ಸರಕಾರಿ ಉಡುಪಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಸಂದೀಪ್ ಜೆ.ಯು ಅವರನ್ನು ಪ್ರಭಾರ ಉಪ ನಿರ್ದೇಶಕರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ. ಅಮಾನತುಗೊಂಡ ಕೃಷ್ಣವೇಣಿಯವರು, ಕಛೇರಿಯಲ್ಲಿ ದರ್ಬಾರ್ ಕೂಡ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ಅಸಮಾಧಾನತೊಡಿಸಿಕೊಂಡಿದ್ದರು ಎನ್ನಲಾಗಿದೆ.