08 August 2025 | Join group

ಕತಾರ್ ನಲ್ಲಿ ನೆಲೆಸಿರುವ ಅಮೆರಿಕದ ಸೇನಾ ನೆಲೆಗೆ ಇರಾನ್ ಕ್ಷಿಪಣಿ ದಾಳಿ: ಯಾವುದೇ ಅಪಾಯವಿಲ್ಲ ಎಂದ ಸಚಿವಾಲಯ

  • 24 Jun 2025 12:48:11 AM

ಯುಎಇ: ಕತಾರ್ ನ ಅಲ್ ಉದೈದ್ ಎಂಬಲ್ಲಿ ನೆಲೆಸಿರುವ ಅಮೆರಿಕದ ಸೇನಾ ನೆಲೆಗೆ ಇರಾನ್ ಸೋಮವಾರ ರಾತ್ರಿ ದಾಳಿ ನಡೆಸಿದೆ. ಈ ಬಗ್ಗೆ ಇರಾನ್ ಅಧಿಕೃತವಾಗಿ ಹೇಳಿಕೆ ನೀಡಿದೆ.

 

ಇರಾನ್ ನ ಬೆದರಿಕೆ ಕರೆಯ ನಂತರ ಕತಾರ್ ಸ್ವಲ್ಪ ಸಮಯದವರೆಗೆ ತನ್ನ ವಾಯುನೆಲೆಯನ್ನು ಮುಚ್ಚಿದ ಸ್ವಲ್ಪ ಸಮಯದ ನಂತರ ಈ ದಾಳಿ ನಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

 

ಕತಾರ್ ನಿಂದ ಬಹಳ ದೂರ ಇದ್ದವರಿಗೂ ಕೂಡ ಆಕಾಶದಲ್ಲಿ ಕ್ಷಿಪಣಿ ಕಾಣುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಕತಾರ್ ಮಾಲ್ ನ ಒಳಗಡೆ ಜನರು ಹೆದರಿಕೊಂಡು ಓಡಾಡುವ ವಿಡಿಯೋ ಕೂಡ ಹರಿದಾಡುತ್ತಿದ್ದವು.

 

'ಅಮೆರಿಕ ನಮ್ಮ ಎಷ್ಟು ಕ್ಷಿಪಣಿಗಳನ್ನು ಕೆಳಗೆ ಉರುಳಿಸಿದೆಯೋ ಅಷ್ಟೇ ಕ್ಷಿಪಣಿ ನಾವು ಕೆಳಗೆ ಉರುಳಿಸಿದ್ದೇವೆ' ಎಂದು ಇರಾನ್ ಕತಾರ್ ಗೆ 6 ಕ್ಷಿಪಣಿ ದಾಳಿ ಮಾಡಿದ ನಂತರ ಹೇಳಿಕೆ ನೀಡಿದೆ.