ಮಂಗಳೂರು: ನಗರದ ಬಿಜೈನಲ್ಲಿರುವ ಬ್ಯೂಟಿ ಪಾರ್ಲರ್ ಮೇಲೆ ಮಂಗಳೂರು ಪೊಲೀಸರು ದಿಡೀರ್ ದಾಳಿ ನಡೆಸಿದ್ದ ಘಟನೆ ಇಂದು ನಡೆದಿದೆ. ಗುಪ್ತಚರ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಬ್ಯೂಟಿ ಪಾರ್ಲರ್ ನಲ್ಲಿ ಅಕ್ರಮ ಚಟುವಟಿಗೆಳಲ್ಲಿ ಭಾಗಿಯಾಗಿದೆ ಎಂಬ ಆರೋಪದ ಆಧಾರದ ಮೇಲೆ ಈ ದಾಳಿ ನಡೆದಿದೆ ಎನ್ನಲಾಗಿದೆ.
ಉಡುಪಿಯ ಬ್ರಹ್ಮಗಿರಿ ನಿವಾಸಿ ಸುದರ್ಶನ್ ಒಡೆತನದ ಈ ಬ್ಯೂಟಿ ಸಲೂನ್ ನ ವ್ಯಾಪಾರದ ಪರವಾನಿಗೆಯನ್ನು ರದ್ದು ಮಾಡಲು ಮಂಗಳೂರು ಮಹಾನಗರ ಪಾಲಿಕೆಗೆ ಶಿಫಾರಸು ಮಾಡಲಾಗಿತ್ತು. ಉರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2025 ರ ಅಡಿಯಲ್ಲಿ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 3(1), 4, 5 ಮತ್ತು 6 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ಸಂಪೂರ್ಣ ಪರಿಶೀಲನೆಯ ನಂತರ, ಅಕ್ರಮ ಚಟುವಟಿಗಳು ನಡೆಯುತ್ತಿದ್ದ ಬ್ಯೂಟಿ ಸಲೂನ್ ನಿನ ಪರವಾನಿಗೆಯನ್ನು ರದ್ದುಗೊಳಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವ ಎಲ್ಲ ಸಂಸ್ಥೆಗಳಿಗೆ ಪೊಲೀಸ್ ಇಲಾಖೆ ಈ ದಾಳಿಯ ಮೂಲಕ ಸ್ಪಷ್ಟ ಸಂದೇಶವನ್ನು ನೀಡಿದೆ.