Image credit: X(Twitter)
ಕಷ್ಟ ಕಾಲದಲ್ಲಿ ನಿರ್ಗತರಿಗೆ ಬೆನ್ನೆಲುಬಾಗಿ ನಿಲ್ಲುವುದರಲ್ಲಿ ಭಾರತ ಎತ್ತಿದ ಕೈ. ವಿಶ್ವದ ಯಾವುದೇ ಮೂಲೆಯಲ್ಲಿ ಜನರು ಸಮಸ್ಯೆಗೆ ತುತ್ತಾದರೆ ಭಾರತ ನೆರವು ನೀಡಲು ಸದಾ ಸಿದ್ಧವಾಗಿದೆ. ಕೊರೋನಾ ಸಂದರ್ಭದಲ್ಲಿ ಭಾರತ ಹಲವಾರು ದೇಶಗಳಿಗೆ ಲಸಿಕೆಗಳನ್ನು ಪೂರೈಸಿ ಸಹಾಯಹಸ್ತ ಚಾಚಿದ ದೇಶವಾಗಿ ಹೊರಹೊಮ್ಮಿತ್ತು.
ಇದೀಗ, ಭಾರತವು ಕ್ಯಾಮರೂನ್(Cameroon) ದೇಶಕ್ಕೆ 1000 ಮೆಟ್ರಿಕ್ ಟನ್ ಅಕ್ಕಿ ಮತ್ತು ಅಗತ್ಯ ಔಷಧಿಗಳನ್ನು ಹಸ್ತಾಂತರ ಮಾಡುವುದರ ಮೂಲಕ ಮತ್ತೊಮ್ಮೆ ಮಾನವೀಯತೆಯನ್ನು ಮೆರೆದಿದೆ.. ಕ್ಯಾಮರೂನ್‌ನ ಪ್ರಾದೇಶಿಕ ಆಡಳಿತ ಸಚಿವ ಪಾಲ್ ಅಟಂಗಾ ನ್ಜಿ ಮತ್ತು ಕ್ಯಾಮರೂನ್‌ಗೆ ಭಾರತದ ಹೈಕಮಿಷನರ್ ವಿಜಯ್ ಖಂಡುಜಾ ಅವರು ಸೋಮವಾರ ನಡೆದ ಸಮಾರಂಭದಲ್ಲಿ ಅಕ್ಕಿ ಮತ್ತು ಅಗತ್ಯ ಔಷಧಿಗಳನ್ನು ಹಸ್ತಾಂತರಿಸಿದರು.
2024 ರಲ್ಲಿ ಕ್ಯಾಮರೂನ್‌ನ ದೂರದ ಉತ್ತರ ಪ್ರದೇಶದಲ್ಲಿ ಸಂಭವಿಸಿದ ಪ್ರವಾಹದ ಸಂತ್ರಸ್ತರನ್ನು ಬೆಂಬಲಿಸುವ ಗುರಿಯನ್ನು ಈ ಮಾನವೀಯ ಕಾರ್ಯ ಹೊಂದಿದೆ ಎಂದು ಕ್ಯಾಮರೂನ್‌ನಲ್ಲಿರುವ ಭಾರತೀಯ ಹೈಕಮಿಷನ್ ತಿಳಿಸಿದೆ. ಅವರ ಹೇಳಿಕೆಯ ಪ್ರಕಾರ, "ಭಾರತವು ಈ ಮಾನವೀಯ ಬೆಂಬಲದ ಮೂಲಕ, ಸವಾಲಿನ ಸಮಯದಲ್ಲಿ ಕ್ಯಾಮರೂನ್‌ಗೆ ವಿಶ್ವಾಸಾರ್ಹ ಪಾಲುದಾರನಾಗಿ ತನ್ನ ಪಾತ್ರವನ್ನು ಪುನರುಚ್ಚರಿಸಿತು ಮತ್ತು ಜಾಗತಿಕ ದಕ್ಷಿಣದ ರಾಷ್ಟ್ರಗಳ ನಡುವೆ ಸಹಕಾರವನ್ನು ಬಲಪಡಿಸಿತು" ಎಂದಿದೆ.
ಭಾರತದ ಹೈಕಮಿಷಿನರ್ ಶ್ರೀ ವಿಜಯ್ ಖಂಡುಜಾ ಕ್ಯಾಮೆರಾನ್ ಸರಕಾರಕ್ಕೆ ದೇಣಿಗೆ ನೀಡಿದ ನಂತರ " ಈ ಮಾನವೀಯ ಕಾರ್ಯವು ಕ್ಯಾಮರೂನ್ ದೇಶದ ದೂರದ ಉತ್ತರ ಪ್ರದೇಶದಲ್ಲಿ 2024 ರಂದು ಅಪ್ಪಳಿಸಿದ ವಿನಾಶಕಾರಿ ಪ್ರವಾಹದ ಸಂತ್ರಸ್ತರನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ಅಗತ್ಯದ ಸಂದರ್ಭದಲ್ಲಿ ಕ್ಯಾಮರೂನ್ ಜೊತೆ ಭಾರತದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತ ಸವಾಲಿನ ಸಮಯದಲ್ಲಿ ಕ್ಯಾಮರೂನ್ ದೇಶದ ಜೊತೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಕ್ಯಾಮರೂನ್ 1960 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ಭಾರತದ ಜೊತೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದೆ. ಭಾರತ 2019 ರಲ್ಲಿ ಯೌಂಡೆಯಲ್ಲಿ ತನ್ನ ನಿವಾಸ ಹೈಕಮಿಷನ್ ಕಚೇರಿಯನ್ನು ತೆರೆಯಿತು. ಇದರ ಹಿಂದೆಯು ಭಾರತ ಕ್ಯಾಮರೂನ್ ದೇಶಕ್ಕೆ ಸಾಲ, ಅಕ್ಕಿ, ಜೋಳ ಹಾಗೆ ಇನ್ನಿತರ ಸಹಾಯವನ್ನು ನೀಡುತ್ತಲೇ ಬಂದಿದೆ.