29 July 2025 | Join group

ಮದ್ಯದಂಗಡಿ ಮಾಲೀಕರಿಗೆ ರಾಜ್ಯ ಸರಕಾರದಿಂದ ಗುಡ್ ನ್ಯೂಸ್ : ಪರವಾನಿಗೆ ಶುಲ್ಕದಲ್ಲಿ ದೊಡ್ಡ ಮಟ್ಟದ ಡಿಸ್ಕೌಂಟ್

  • 25 Jun 2025 07:41:45 PM

ಬೆಂಗಳೂರು: ಮದ್ಯದಂಗಡಿ ಮಾಲಕರಿಗೆ ಡಬಲ್ ಸಂತೋಷವನ್ನು ರಾಜ್ಯ ಸರಕಾರ ನೀಡಿದೆ. ಕರ್ನಾಟಕ ಸರಕಾರವು ಅಬಕಾರಿ ಪರವಾನಿಗೆ ಶುಲ್ಕವನ್ನು 100% ರಷ್ಟು ಹೆಚ್ಚಳವನ್ನು ಕಡಿತಗೊಳಿಸಿ ಇದೀಗ 50% ಗೆ ತಂದಿರಿಸಿದೆ. ಇದರಿಂದ ಮದ್ಯದ ಅಂಗಡಿ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

 

ಇದರ ಜೊತೆಗೆ ಪ್ರತಿ ವರ್ಷಕೊಮ್ಮೆ ನಡೆಯುತ್ತಿದ್ದ ನಿಯಂತ್ರಕ ತಪಾಸಣೆಯನ್ನು ಇನ್ನು ಮುಂದೆ ಐದು ವರ್ಷಕೊಮ್ಮೆ ನಡೆಸುವ ಯೋಜನೆ ತರುವುದರ ಮೂಲಕ ಪರಿಹಾರವನ್ನು ಘೋಷಿಸಿದೆ. ಎರಡು ವಾರಗಳ ಹಿಂದೆ ಮದ್ಯದ ಅಂಗಡಿ ಮಾಲಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದರು.

 

ಕರ್ನಾಟಕ ಸರಕಾರ ಇದ್ದಕ್ಕಿದ್ದಂತೆ ಅಬಕಾರಿ ಪರವಾನಿಗ ಶುಲ್ಕವನ್ನು ಶೇಕಡಾ 100 ರಷ್ಟು ಹೆಚ್ಚಿಸಿತ್ತು. ರಾಜ್ಯ ಸರಕಾರದ ಈ ನಿರ್ಧಾರದ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಪ್ರತಿಭಟನೆಗೆ ಮುಂದಾಗಿದ್ದರು.

 

ಈ ಬೆನ್ನಲ್ಲೇ ಮದ್ಯದಂಗಡಿ ಮಾಲೀಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ, ಅಬಕಾರಿ ಪರವಾನಿಗೆ ನವೀಕರಣ ಶುಲ್ಕವನ್ನು 50% ರಷ್ಟು ಕಡಿಮೆ ಮಾಡಿ ಆದೇಶ ನೀಡಿದೆ. ಈ ಪರಿಷ್ಕೃತ ದರ ಜುಲೈ 1, 2025 ರಿಂದ ಜಾರಿಗೆ ಬರಲಿದೆ.