Image credit: X/@bykarthikreddy
ವಿಟ್ಲ: ವಿಟ್ಲದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಒಂದು ಒಳ್ಳೆಯ ಸುದ್ದಿ ಸಿಗಲಿದೆ. ಇಲ್ಲಿಂದ ಬೆಂಗಳೂರಿಗೆ ನೇರ ಬಸ್ ಸೇವೆ ಇಲ್ಲದೇ ಇರುವುದರಿಂದ ಕಷ್ಟ ಪಡುವ ಸನ್ನಿವೇಶಗಳು ಎದುರಾಗುತ್ತಿದ್ದವು . ಬೆಂಗಳೂರಿಗೆ ನೇರವಾಗಿ ಬಸ್ ಸೇವೆ ಪಡೆಯಲು ಸದ್ಯಕ್ಕೆ ಅವರು ಕಲ್ಲಡ್ಕ ಅಥವಾ ಉಪ್ಪಿನಂಗಡಿ ಅಥವಾ ಪುತ್ತೂರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಇದೆ.
ಪುತ್ತೂರು ಶಾಸಕ ಅಶೋಕ್ ರೈ ನೇತೃತ್ವದಲ್ಲಿ, ಸಾರಿಗೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಮಂಗಳೂರು, ಬಂಟ್ವಾಳ, ಕಲ್ಲಡ್ಕ ಮಾರ್ಗವಾಗಿ ವಿಟ್ಲ ನಗರಕ್ಕೆ ತಲುಪಿ ಅಲ್ಲಿಂದ ಪುತ್ತೂರು-ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಬಹಳ ವರ್ಷಗಳಿಂದ ವಿಟ್ಲದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರ ಬೇಡಿಕೆಯನ್ನು ಪೂರೈಸುವ ಸಲುವಾಗಿ ಈ ಬಸ್ ವ್ಯವಸ್ಥೆ ಮಾಡಲಾಗಿದೆ. ಅಂಬಾರಿ ಉತ್ಸವ ಹವಾ ನಿಯಂತ್ರಿತ ಬಸ್ ಸಂಚಾರ ನಡೆಯಲಿದೆ.
ಶೀಘ್ರದಲ್ಲೇ ಬಸ್ ವ್ಯವಸ್ಥೆ ಮಾಡುವ ಯೋಜನೆಯಿದ್ದು, ಈ ವ್ಯವಸ್ಥೆ ಕಾರ್ಯಗತವಾದರೆ ವಿಟ್ಲದಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಬೇರೆ ನಗರಗಳಿಗೆ ಹೋಗಿ ಬಸ್ಸಿಗಾಗಿ ಕಾಯುವುದು ತಪ್ಪಲಿದೆ.