29 July 2025 | Join group

4 ಹುಲಿ ಮರಿಗಳು ಸೇರಿ 5 ಹುಲಿಗಳ ಅಸಹಜ ಸಾವು: ತೀವ್ರ ಖಂಡನೆ

  • 27 Jun 2025 11:22:49 AM

ಚಾಮರಾಜನಗರ: ದೇಶಾದ್ಯಂತ ಅಳಿವಿನಂಚಿನಲ್ಲಿರುವ ಭಾರತದ ರಾಷ್ಟ್ರ ಪ್ರಾಣಿ 'ಹುಲಿ'ಯ ಸಂಖ್ಯೆ ಕಡಿಮೆಯಾಗುತ್ತಿರುವಾಗಲೇ, ಕರ್ನಾಟಕದಲ್ಲಿ ಘೋರ ಸಂಗತಿಯೊಂದು ನಡೆದಿದೆ.

 

ಕರ್ನಾಟಕ ಹುಲಿಯ ಸಂರಕ್ಷಣೆಯಲ್ಲಿ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವ ರಾಜ್ಯ ಆದರೆ ಚಾಮರಾಜ ಜಿಲ್ಲೆಯ, ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಇದ್ದಕ್ಕಿದಂತೆ ಹುಲಿಗಳ ಸಾವು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.

 

ನಿನ್ನೆ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ನಾಲ್ಕು ಹುಲಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಜ್ಯ ಸರ್ಕಾರ ಇಂತಹ ಗಂಭೀರ ವಿಷಯಗಳಲ್ಲಿ ನಿರ್ಲಕ್ಷ್ಯ ಧೋರಣೆ ತಾಳದೇ ಕೂಡಲೇ ಸೂಕ್ತ ತನಿಖೆ ನಡೆಸಬೇಕು ಮತ್ತು ಹುಲಿ ಸಂರಕ್ಷಣೆಗೆ ಹೆಚ್ಚಿನ ಕ್ರಮ ವಹಿಸಬೇಕು ಎಂಬ ಕೂಗು ರಾಜ್ಯದಾದ್ಯಂತ ಕೇಳಿ ಬರುತ್ತಿದೆ.

 

ರಾಜ್ಯದ ಅರಣ್ಯ ಸಚಿವರಾದ ಶ್ರೀ ಈಶ್ವರ್ ಖಂಡ್ರೆಯವರೇ ಇದು ಅಸಹಜ ಸಾವು ಎಂದು ಸ್ಪಷ್ಟ ಪಡಿಸಿದ್ದು ಆದರೆ ವಿಷ ಪ್ರಾಶನವಾಗಿದೆ ಎಂಬ ಆರೋಪವೂ ಕೂಡ ಕೇಳಿ ಬರುತ್ತಿದೆ.