29 July 2025 | Join group

ಇಂದಿರಾ ಗಾಂಧಿ ಹೇರಿದ್ದ 'ತುರ್ತು ಪರಿಸ್ಥಿತಿ(Emergency)ಯಿಂದ ದುರ್ಬಲ ವರ್ಗದವರಿಗೆ ಲಾಭವಾಗಿದೆ: ಮಾಜಿ ಸಚಿವ ರಮಾನಾಥ ರೈ

  • 27 Jun 2025 04:51:19 PM

ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಇಂದು ಪತ್ರಿಕಾಗೋಷ್ಠಿ ನಡೆಸಿ ಹಲವಾರು ವಿಚಾರಗಳನ್ನು ಮಾಧ್ಯಮದ ಮುಂದಿಟ್ಟರು. ಅವರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ' ಇಂದಿರಾ ಗಾಂಧಿ ಹೇರಿದ್ದ 'ತುರ್ತು ಸಂದರ್ಭ(ಎಮರ್ಜೆನ್ಸಿ)', ದುರ್ಬಲ ವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ ಮತ್ತು ಇದರಿಂದ ಸಾಕಷ್ಟು ಬಡವರಿಗೆ ಲಾಭವಾಗಿದೆ' ಎಂದು ತಿಳಿಸಿದ್ದಾರೆ.

 

'ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಜನ ಗೌರವದಿಂದ ಕಾಣುತ್ತಾರೆ. ಅತ್ಯಂತ ಫಲಾನುಭವಿಗಳು ಇಂದಿರಾ ಗಾಂಧಿಯವರ ಕಾರ್ಯಕ್ರಮದಿಂದ ನೆರವು ಕೂಡ ಪಡೆದಿದ್ದಾರೆ. ಅವರು ಸಾಮಾಜಿಕ ನ್ಯಾಯದಿಂದ ವಂಚಿತರಾದ ದುರ್ಬಲ ವರ್ಗದವರಿಗೆ ಬಹಳಷ್ಟು ಕೆಲಸ ಮಾಡಿದ್ದಾರೆ' ಎಂದು ಹೇಳಿದ್ದಾರೆ.

 

ಮುಂದಕ್ಕೆ ಮಾತನಾಡಿ, 'ದೇಶಕ್ಕೆ ಪ್ರಾಣ ತ್ಯಾಗ ಮಾಡಿದ ಇಂದಿರಾ ಗಾಂಧಿಯನ್ನು ಬಿಜೆಪಿಯವರು ಅವಮಾನಿಸುವುದು ಖಂಡನೀಯ, ಭೂ ಮಸೂದೆ ಕಾನೂನು ಪರಿಣಾಮಕಾರಿಯಾಗಿ ಅನುಷ್ಠಾನವಾಗಿದ್ದೆ ಅವರ ಕಾಲದಲ್ಲಿ ಎಂದು ಹೇಳಿದರು. ತುರ್ತು ಪರಿಸ್ಥಿತಿಯನ್ನು ನಿಂದಿಸುವ ಕೆಲಸವನ್ನು ಬಿಜೆಪಿಯವರು ಮಾಡುವುದು ಸರಿಯಲ್ಲ, ಅಂದಿಂನ ಕಾಲದಲ್ಲಿ ಇಂದಿರಾ ಗಾಂಧಿಯವರ ದೃಢ ನಿರ್ಧಾರದಿಂದ ಬಡವರಿಗೆ ಬಹಳಷ್ಟು ನೆರವಾಗಿದೆ' ಎಂದರು.

 

ಬಿಜೆಪಿಗರು ವಿರೋಧ ಪಕ್ಷದಲ್ಲಿ ಇರುವುದರಿಂದ ಸಹಜವಾಗಿ ಈ ರೀತಿಯ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಗುಜರಾತ್ ಹತ್ಯಾಕಾಂಡ ಸಹಿತ ಇನ್ನಿತರ ವಿಚಾರಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಯಾರು ಮಾತನಾಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಮತ್ತು ಇನ್ನಿತರ ಕಾಂಗ್ರೆಸ್ ಮುಖಂಡರುಗಳು ಪಾಲ್ಗೊಂಡಿದ್ದರು.