01 July 2025 | Join group

ಬಿ.ಸಿ ರೋಡು: ಭೀಕರ ಅಪಘಾತದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವೃತಿಯಲ್ಲಿದ ವ್ಯಕ್ತಿಯ ಮೃತ್ಯು!

  • 30 Jun 2025 07:47:50 PM

ಬಂಟ್ವಾಳ: ಬಿ.ಸಿ ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ರಸ್ತೆ ಕ್ರಾಸ್ ಮಾಡುವಾಗ ಬಿ.ಸಿ ರೋಡಿನಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಟ್ಯಾಂಕರ್ ಒಂದು ಅಪ್ಪಳಿಸಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಬಗ್ಗೆ ವರದಿಯಾಗಿದೆ

 

ಶಂಭೂರು ಕೊಪ್ಪಳ ನಿವಾಸಿಯ ಚಿದಾನಂದ(50) ಎಂಬವರು ಮೃತಪಟ್ಟ ದುರ್ದೈವಿ. ಚಿದಾನಂದರವರು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯಲ್ಲಿ ಕೃಷಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸಿಕೊಂಡಿದ್ದರು. ಕೆಲಸದ ನಿಮಿತ್ತ ಸ್ಕೂಟರ್ ನಲ್ಲಿ ಚಲಿಸುತ್ತಿದ್ದಾಗ ರೋಡ್ ಕ್ರಾಸ್ ಮಾಡುವಾಗ ಅಪಘಾತ ನಡೆದಿದೆ.

 

ಅವರು ಶಂಭೂರ್ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿರುವ ಪತ್ನಿ, ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಇವರ ಹಠಾತ್ ಮರಣ ಧರ್ಮಸ್ಥಳ ಯೋಜನೆಯ ಸಹದ್ಯೋಗಿಗಳು ಮತ್ತು ಸಮುದಾಯದ ಜನರಲ್ಲಿ ದುಃಖದ ವಾತಾವರದಲ್ಲಿ ಮುಳುಗಿಸಿದೆ.

 

ಬಂಟ್ವಾಳ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.