ಬೆಂಗಳೂರು: ನಮ್ಮ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ನಾವು 'ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್) ಸಂಘಟನೆಯನ್ನು ನಿಷೇಧಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ರಾಜ್ಯ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.
ಸೋಮವಾರ ಬೆಂಗಳೂರಿನನಲ್ಲಿ ಮಾಧ್ಯಮದವರ ಜೊತೆ ಮಾತನಾಡಿ 'ನಾವು ಈ ಹಿಂದೆ ಆರ್ ಎಸ್ ಎಸ್ ಸಂಘಟನೆಯನ್ನು ಎರಡು ಬಾರಿ ಬ್ಯಾನ್ ಮಾಡಿದ್ದೆವು. ಬ್ಯಾನ್ ಮಾಡಿದ ನಂತರ ಸಂಘಟನೆಯ ಪ್ರಮುಖರು ಬ್ಯಾನ್ ವಾಪಸ್ ತೆಗೆದುಕೊಳ್ಳಿ ಎಂದು ಬೇಡಿಕೊಂಡು ಬಂದಿದ್ದರು. ಅದೇ ದೊಡ್ಡ ತಪ್ಪಾಯಿತು' ಎಂದು ಹೇಳುವ ಮೂಲಕ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ.
ನಾವು ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ ಆರ್ ಎಸ್ ಎಸ್ ಅನ್ನು ಬ್ಯಾನ್ ಮಾಡುವ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ(BBMP) ಕಸದ ಲಾರಿಯಲ್ಲಿ ಆಶಾ ಶವ ಪತ್ತೆ: ಕೊಲೆ ಮಾಡಿ ಬಿಸಾಡಿದ ಶಂಸುದ್ದೀನ್ ಬಂಧನ
ಸಂವಿಧಾನದಲ್ಲಿ ಸೇರಿಸಲಾಗಿರುವ 'ಜಾತ್ಯತೀತ' ಪದದಲ್ಲಿ ಏನು ತಪ್ಪಿದೆ? 'ಸಮಾಜವಾದ'ದಲ್ಲಿ ಏನು ತಪ್ಪಿದೆ? ಆರ್ ಎಸ್ ಎಸ್ ನವರಿಗೆ ಯಾಕೆ ಈ ಪದದಲ್ಲಿ ಅಲರ್ಜಿ? ಇವರ ಸಿದ್ಧಾಂತದಲ್ಲಿ ಒಂದೇ ಧರ್ಮ ಇರಬೇಕು. ಅವರೊಬ್ಬರೇ ಇರಬೇಕು, ಆದರೆ ನಾವು ಸಂವಿಧಾನ ಎತ್ತಿ ಹಿಡಿಯುವ ಕೆಲಸ ಮಾಡುತ್ತೇವೆ. ಅಂಬೇಡ್ಕರ್ ಅವರು ಏನು ಹೇಳಿದ್ದಾರೆ ಎಂಬುದನ್ನು ಆರ್ ಎಸ್ ಎಸ್ ನವರು ಓದಿ ತಿಳಿಯಲಿ ಎಂದು ತಿಳಿಸಿದ್ದಾರೆ.