29 July 2025 | Join group

ಬಿಬಿಎಂಪಿ(BBMP) ಕಸದ ಲಾರಿಯಲ್ಲಿ ಆಶಾ ಶವ ಪತ್ತೆ: ಕೊಲೆ ಮಾಡಿ ಬಿಸಾಡಿದ ಶಂಸುದ್ದೀನ್ ಬಂಧನ

  • 02 Jul 2025 10:14:13 AM

ಬೆಂಗಳೂರು: ಬಿಬಿಎಂಪಿ ಕಸದ ಲಾರಿಯಲ್ಲಿ ಎರಡು ದಿವಸ ಹಿಂದೆ ಸಿಕ್ಕಿದ ಮಹಿಳೆ ಶವ ಬಹಳ ಕುತೂಹಲ ಕೆರಳಿಸಿತ್ತು. ಇದೀಗ ಪೊಲೀಸರ ತನಿಖೆಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆಶಾ(32) ಎನ್ನುವ ಮಹಿಳೆಯನ್ನು ಆಕೆಯ ಪ್ರಿಯಕರ ಮೊಹಮ್ಮದ್ ಶಂಸುದ್ದೀನ್(33) ಕೊಲೆ ಮಾಡಿ ಬಿಬಿಎಂಪಿ ಕಸದ ತೊಟ್ಟಿಗೆ ಎಸೆದಿದ್ದ.

 

ಸಹಬಾಳ್ವೆಯಲ್ಲಿದ್ದ ವ್ಯಕ್ತಿಯೇ ಮಹಿಳೆಯನ್ನು ಹತ್ಯೆ ಮಾಡಿರುವುದು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಆರೋಪಿ ಅಸ್ಸಾಂ ಮೂಲದ ಮೊಹಮ್ಮದ್ ಶಂಸುದ್ದೀನ್ ಮತ್ತು ಆಶಾ ಲಿವಿಂಗ್ ರಿಲೇಷನ್ಶಿಪ್ ನಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು.

 

ಇವರಿಬ್ಬರೂ ಹುಲಿಮಾವು ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಸಂದರ್ಭದಲ್ಲಿ, ಆಶಾ ರಾತ್ರಿ ಇಡೀ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತಲೇ ಎಂಬ ಅನುಮಾನದ ಭೂತ ಸಂಶುದ್ದೀನ್ ತಲೆಗೆ ಹೊಕ್ಕಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಇಬ್ಬರು ಜಗಳವಾಡಿ, ಆರೋಪಿ ಆಶಾಳ ಕತ್ತು ಹಿಸುಕಿ ಕೊಲೆಗೈದಿದ್ದಾನೆ.

 

ಆಶಾ ಈ ಮೊದಲು ಮದುವೆಯಾಗಿದ್ದು, ಗಂಡ ಮೃತಪಟ್ಟಿದ್ದ ಕಾರಣ ಇಬ್ಬರು ಮಕ್ಕಳ ಜೊತೆ ನಗರದಲ್ಲಿ ವಾಸಿಸುತ್ತಿದ್ದಳು. ಈ ನಡುವೆ ತಾನು ಹೌಸ್ ಕೀಪಿಂಗ್ ಕೆಲಸಕ್ಕೆ ಹೋಗುತ್ತಿದ್ದ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಸಂಶುದ್ದೀನ್ ನ ಪರಿಚಯವಾಗುತ್ತದೆ. ಆರೋಪಿ ಕೂಡ ಈಗಾಗಲೇ ಒಂದು ಮದುವೆಯಾಗಿರುತ್ತಾನೆ ಎಂದು ವರದಿಯಾಗಿದೆ.

ಇದನ್ನೂ ಓದಿಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗ 'ಆರ್ ಎಸ್ ಎಸ್(RSS)' ನಿಷೇಧ: ಪ್ರಿಯಾಂಕಾ ಖರ್ಗೆ

ಚೆನ್ನಮ್ಮ ಕೆರೆ ಅಚ್ಚುಕಟ್ಟು ಪೊಲೀಸ್ ಘಟನೆ ನಡೆದ 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.