ಮಂಗಳೂರು: ನಗರದ ಮಹಾನಗರ ಪಾಲಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಮತ್ತು ಭ್ರಷ್ಟಾಚಾರ ಮಿತಿಮೀರಿದ್ದು, ಲೋಕಾಯುಕ್ತದಿಂದ ದಿಢೀರ್ ದಾಳಿ ನಡೆಸಲಾಗಿದೆ. ಮಧ್ಯವರ್ತಿಗಳನ್ನು ಸುಪರ್ದಿಗೆ ಪಡೆದು ವಿಚಾರಣೆ ನಡೆಸಲಾಗಿದೆ.
ಲೋಕಾಯುಕ್ತ ದಾಳಿಯಿಂದ ಹಲವು ಮಾಹಿತಿ ಬಹಿರಂಗ ಆಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಮೊದಲೆಲ್ಲ ನೋಟುಗಳ ಕಂತೆ ನೀಡಲಾಗುತ್ತಿತ್ತು ಇದೀಗ ಡಿಜಿಟಲ್ ಪೇ ಮೂಲಕ ಬ್ರೋಕರ್ ಗಳಿಗೆ ಹಣ ವರ್ಗಾವಣೆಯಾಗುತ್ತದೆ ಎಂದು ಬಿಜೆಪಿ ಮಂಗಳೂರು ದಕ್ಷಿಣ ರಾಜ್ಯದ ಶಾಸಕ ವೇದವ್ಯಾಸ ಕಾಮತ್ ಗಂಭೀರ ಆರೋಪ ಹೊರಿಸಿದ್ದಾರೆ.
'ಯಥಾ ರಾಜ ತಥಾ ಪ್ರಜಾ ಎನ್ನುವ ರೀತಿಯಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಮುಖ್ಯಮಂತ್ರಿಗಳಿಂದ ಮಂತ್ರಿಗಳವರೆಗೆ ಯಾವ ರೀತಿಯಲ್ಲಿ ಭ್ರಷ್ಟಾಚಾರ ಮಾಡುತ್ತಾರೋ, ಅದೇ ರೀತಿ ಅವರ ಅಧೀನದಲ್ಲಿರುವ ಅಧಿಕಾರಿ ವರ್ಗದವರು ಬಹಳ ದೊಡ್ಡ ರೀತಿಯಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡುತ್ತಿದ್ದಾರೆ ಎನ್ನುವ ವಿಚಾರ ಸಾರ್ವಜನಿಕರು ಆರೋಪಿಸುತ್ತಿದ್ದಾರೆ' ಎಂದು ಪ್ರತಿಷ್ಠಿತ ಕನ್ನಡ ಮಾದ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
'ಲೋಕಾಯುಕ್ತ ದಾಳಿ ಮೊದಲೇ ಅಧಿಕಾರಿಗಳಿಗೆ ಗೊತ್ತಾಗುತ್ತದೆ. ಬಡವರ ಬಳಿ ಹಣ ಪಡೆಯದೆ ಕೆಲಸ ಮಾಡುವುದಿಲ್ಲ. ದಾಳಿ ಮೇಲೆ ಒಬ್ಬನ ಬಳಿ ರೂ. 5 ಲಕ್ಷ ಹಣ ಸಿಕ್ಕಿದೆ. ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇರುವಾಗ ಹಣ ಯಾಕೆ ತರಬೇಕು ಕೋಟಿ ಕೋಟಿ ಹಣ ಕೊಟ್ಟು ಸರಕಾರಿ ಹುದ್ದೆಯನ್ನು ಪಡೆಯುತ್ತಾರೆ, ನಂತರ ಇಲ್ಲಿ ಬಂದು ಹಣ ರಿಕವರಿ ಮಾಡುವುದಕ್ಕೆ ಭ್ರಷ್ಟಾಚಾರ ಮಾಡುತ್ತಾರೆ' ಎನ್ನುವುದು ಶಾಸಕರ ಅಭಿಪ್ರಾಯವಾಗಿದೆ.
ಈ ಹಿಂದೆ ಮಹಿಳಾ ಅಧಿಕಾರಿಯೊಬ್ಬರು ಲೋಕಾಯುಕ್ತ ದಾಳಿಯಲ್ಲಿ ಜೈಲಿಗೆ ಹೋದ ಬಗ್ಗೆ ಪ್ರಕರಣ ನಡೆದಿದ್ದು ನಂತರ ಜೈಲಿನಿಂದ ಹೊರಬಂದು ಮತ್ತೊಮ್ಮೆ ಹಗರಣ ನಡೆಸಿ ಅಮಾನನುಗೊಂಡ ಬಗ್ಗೆ ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.