29 July 2025 | Join group

ತೆಲಂಗಾಣ ಹಿಂದು ಫೈರ್ ಬ್ರಾಂಡ್ ಬಿಜೆಪಿ ಶಾಸಕ ಟಿ. ರಾಜಸಿಂಗ್ ರಾಜೀನಾಮೆ

  • 02 Jul 2025 05:56:11 PM

ತೆಲಂಗಾಣ: ಗೋಶಮಹಲ್ ಕ್ಷೇತ್ರದ ಶಾಸಕ, ಹಿಂದೂ ಫೈರ್‌ಬ್ರಾಂಡ್ ಟಿ. ರಾಜಾ ಸಿಂಗ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ತೆಲಂಗಾಣದಲ್ಲಿ ಪಕ್ಷದ ಹೊಸ ಅಧ್ಯಕ್ಷರಾಗಿ ರಾಮಚಂದ್ರ ರಾವ್ ಅವರನ್ನು ಪಕ್ಷ ಘೋಷಿಸಿದ ನಂತರ ಈ ನಿರ್ಧಾರ ಬಂದಿದೆ.

 

ಪಕ್ಷದ ಮುಖ್ಯಸ್ಥ ಜಿ. ಕಿಶನ್ ರೆಡ್ಡಿ ಅವರಿಗೆ ಬರೆದ ಪತ್ರದಲ್ಲಿ, ತಮಗೆ ಸಂಪೂರ್ಣ ಆಘಾತ ಮತ್ತು ನಿರಾಶೆಯಾಗಿದೆ ಎಂದು ಹೇಳಿದ್ದಾರೆ.

 

ಶ್ರೀ ರಾಮಚಂದ್ರ ರಾವ್ ಅವರನ್ನು ತೆಲಂಗಾಣ ರಾಜ್ಯದ ಹೊಸ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು ನನಗೆ ಮಾತ್ರವಲ್ಲದೆ, ಸಂಕಷ್ಟದ ಸಮಯದಲ್ಲಿ ಪಕ್ಷಕ್ಕಾಗಿ ನಿಂತ ಲಕ್ಷಾಂತರ ಕಾರ್ಯಕರ್ತರು, ನಾಯಕರು ಮತ್ತು ಮತದಾರರಿಗೆ ಆಘಾತ ಮತ್ತು ನಿರಾಶೆಯನ್ನುಂಟು ಮಾಡಿದೆ ಎಂದು ತನ್ನ ಬೇಸರ ವ್ಯಕ್ತಪಡಿಸಿದ್ದಾರೆ. 

 

ಪಕ್ಷದ ಬೆಳವಣಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಅನೇಕ ಸಮರ್ಥ ನಾಯಕರು, ಶಾಸಕರು ಮತ್ತು ಸಂಸದರಿದ್ದಾರೆ, ಅವರು ಪಕ್ಷವನ್ನು ಮುನ್ನಡೆಸುವ ಸಾಮರ್ಥ್ಯ, ಶಕ್ತಿ ಮತ್ತು ಸಂಪರ್ಕವನ್ನು ಹೊಂದಿದ್ದಾರೆ ಅಂತವರನ್ನು ಹೊರತುಪಡಿಸಿ ರಾಮಚಂದ್ರ ರಾವ್ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ಸರಿಯಲ್ಲ ಎಂದಿದ್ದಾರೆ. 

 

ಆದಾಗ್ಯೂ ಅವರು ಹಿಂದುತ್ವಕ್ಕಾಗಿ ಕೆಲಸ ಮಾಡುತ್ತಾರೆ ಮತ್ತು ಅವರು ಹಿಂದುತ್ವ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದಾರೆ. ತೆಲಂಗಾಣದಲ್ಲಿ ಸಮರ್ಥ ಪಕ್ಷದ ಅಧ್ಯಕ್ಷರನ್ನು ನೇಮಿಸಿದರೆ ಬಿಜೆಪಿ ಅಧಿಕಾರಕ್ಕೆ ಬರಬಹುದು ಎಂದು ಅವರು ಒತ್ತಿ ಹೇಳಿದರು.

 

ಟಿ. ರಾಜಾ ಸಿಂಗ್ ರಾಮನವಮಿಯ ದೊಡ್ಡ ಸಂಘಟಕರು ಮತ್ತು ಅವರ ಲಕ್ಷಾಂತರ ಅನುಯಾಯಿಗಳು ದೇಶಾದ್ಯಂತ ಅಂದಿನ ಭಾಷಣವನ್ನು ವೀಕ್ಷಿಸುತ್ತಾರೆ. ರಾಜಾ ಅವರ ರಾಜೀನಾಮೆ ತೆಲಂಗಾಣದಲ್ಲಿ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ