ಪುತ್ತೂರು: ಆನ್‌ಲೈನ್ ಬೆಟ್ಟಿಂಗ್‌ನ ನಷ್ಟದಿಂದ ತತ್ತರಿಸಿದ ಪುತ್ತೂರಿನ 32 ವರ್ಷದ BE ಪದವೀಧರ ಸುಬ್ರಹ್ಮಣ್ಯ ಪ್ರಸಾದ್, ಬೆಂಗಳೂರಿನ ಸಂಸ್ಥೆಯಿಂದ 56 ಲ್ಯಾಪ್‌ಟಾಪ್‌ಗಳು ಹಾಗೂ 16 ಐಫೋನ್‌ಗಳನ್ನು ಕದ್ದ ಆರೋಪದಲ್ಲಿ ಬಂಧಿತನಾಗಿದ್ದಾರೆ.
ಐಟಿ ವಿಭಾಗದ ಮುಖ್ಯಸ್ಥರಾಗಿದ್ದ ಅವರು, ಕಂಪನಿಯ ವಿಶ್ವಾಸವನ್ನು ದುರುಪಯೋಗಪಡಿಸಿಕೊಂಡು ದಾಸ್ತಾನು ಪ್ರವೇಶದ ಮೂಲಕ ಸಾಧನಗಳನ್ನು ಕದ್ದಿದ್ದಾರೆ.
ಪ್ರಸಾದ್ ಅವರು ಇವುಗಳನ್ನು ಪರಿಚಯಸ್ಥರ ಮೂಲಕ ಮಾರಾಟ ಮಾಡಿ ಸಾಲ ತೀರಿಸಲು ಯತ್ನಿಸಿದ್ದರು. ಪರಪ್ಪನ ಅಗ್ರಹಾರ ಪೊಲೀಸರು ದಾಳಿ ನಡೆಸಿ 19 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆನ್‌ಲೈನ್ ಬೆಟ್ಟಿಂಗ್‌ನ ಹುಚ್ಚು ಈಗ ಆರೋಪಿಯನ್ನು ಪೊಲೀಸ್ ಸ್ಟೇಷನ್ ಕಂಬಿ ಎಣಿಸುವಾಗೆ ಮಾಡಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬೆಟ್ಟಿಂಗ್ ಮೋಸ, ಬದುಕು ನಾಶ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.